Lake water entered the fields in Shimoga's Bommanakatte! ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಗದ್ದೆಗಳಿಗೆ ನುಗ್ಗಿದ ಕೆರೆ ನೀರು!

shimoga | ಶಿವಮೊಗ್ಗ – ಬೊಮ್ಮನಕಟ್ಟೆಯಲ್ಲಿ ಗದ್ದೆಗಳಿಗೆ ನುಗ್ಗಿದ ಕೆರೆ ನೀರು!

ಶಿವಮೊಗ್ಗ (shivamogga), ಆ. 19: ಭಾರೀ ಮಳೆಗೆ (heavy rainfall), ಶಿವಮೊಗ್ಗ ನಗರದ ಬೊಮ್ಮನಕಟ್ಟೆ (bommannakatte) ದೇವಾಲಯ ಸಮೀಪದ ಕೆರೆಯ ತೂಬು ಹಾಗೂ ಪೈಪ್ ಒಡೆದು, ತಗ್ಗು ಪ್ರದೇಶದಲ್ಲಿರುವ ಕೃಷಿ ಜಮೀನುಗಳಿಗೆ ಕೆರೆ ನೀರು ನುಗ್ಗಿದ ಘಟನೆ ಆ. 19 ರ ಸೋಮವಾರ ಬೆಳಿಗ್ಗೆ ನಡೆದಿದೆ.

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ (rain) ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ನಡುವೆ ಸೋಮವಾರ ಮುಂಜಾನೆ ಬಿದ್ದ ಮಳೆಗೆ ಕೆರೆಗೆ ಅಪಾರ ಪ್ರಮಾಣದ ನೀರು (rain water) ಬಂದಿದೆ. ಇದರಿಂದ ಕೆರೆ ಅಭಿವೃದ್ದಿ ಕಾಮಗಾರಿ ವೇಳೆ ಹಾಕಲಾಗಿದ್ದ ಪೈಪ್ ಮತ್ತು ತೂಬು ಕಿತ್ತು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆರೆಯಿಂದ (lake) ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ತಗ್ಗು ಪ್ರದೇಶದಲ್ಲಿನ (low lying areas) ಭತ್ತದ ಗದ್ದೆಗಳಿಗೆ (paddy field) ನುಗ್ಗಿದೆ. ಇತ್ತೀಚೆಗಷ್ಟೆ ನಾಟಿ ಮಾಡಿದ್ದ ಸಸಿಗಳು ಕೊಚ್ಚಿ ಹೋಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಗ್ರಾಮಸ್ಥರೇ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಸದರಿ ಕೆರೆಯು ಜಿಲ್ಲಾ ಪಂಚಾಯ್ತಿ (zilla panchayat) ಆಡಳಿತದ ಅಧೀನದಲ್ಲಿದೆ. ತಕ್ಷಣವೇ ಕೆರೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

shimoga | The menace of pick packet thieves has started again at Shimoga KSRTC bus station! ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮತ್ತೆ ಶುರುವಾಗಿದೆ ಪಿಕ್ ಪ್ಯಾಕೆಟ್ ಕಳ್ಳರ ಹಾವಳಿ! Previous post shimoga | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮತ್ತೆ ಶುರುವಾಗಿದೆ ಪಿಕ್ ಪ್ಯಾಕೆಟ್ ಕಳ್ಳರ ಹಾವಳಿ!
fake galic made with cement ದಂಧೆಕೋರರ ಕರಾಮತ್ತು : ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ..! Next post cement garlic | ದಂಧೆಕೋರರ ಕರಾಮತ್ತು : ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ..!