Ganja sale case in Bhadravati taluk: Three arrested! ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ : ಮೂವರ ಬಂಧನ!

bhadravati | ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ : ಮೂವರ ಬಂಧನ!

ಭದ್ರಾವತಿ (bhadravati), ಅ. 27: ಭದ್ರಾವತಿ ನಗರ ಹಾಗೂ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಮೂವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮನೆ ಮೇಲೆ ದಾಳಿ : ಗಾಂಜಾ ಸಂಗ್ರಹಣೆ ಮಾಡಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಹೊಳೆಹೊನ್ನೂರು ಸಮೀಪದ ಅಗರದಹಳ್ಳಿ ಕ್ಯಾಂಪ್ ನಲ್ಲಿ ನಡೆದಿದೆ. ಅಗರದಹಳ್ಳಿ ಕ್ಯಾಂಪ್ ನಿವಾಸಿ ಸಂಜೀವ್ ರಾಜು (40) ಹಾಗೂ ಭದ್ರಾವತಿಯ ಸಿದ್ದರಕಾಲೋನಿ ನಿವಾಸಿ ಗುರುಪ್ರಸಾದ್ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ 2.80 ಲಕ್ಷ ರೂ. ಮೌಲ್ಯದ 5 ಕೆಜಿ 574 ಗ್ರಾಂ ತೂಕದ ಒಣ ಗಾಂಜಾ ಹಾಗೂ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಮತ್ತವರ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನಿಲ್ದಾಣದಲ್ಲಿ ಮಾರಾಟ : ಬಸ್ ನಿಲ್ದಾಣದಲ್ಲಿ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ, ಭದ್ರಾವತಿ ಹಳೇ ಸಿಗೇಬಾಗಿ ಬಳಿ ನಡೆದಿದೆ. ಸಿಗೇಬಾಗಿ ಬಡಾವಣೆ ನಿವಾಸಿ ಮೊಹಮ್ಮದ್ ಅಬ್ಬಾಸ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಯಿಂದ 95 ಸಾವಿರ ರೂ. ಮೌಲ್ಯದ 1 ಕೆಜಿ 37 ಗ್ರಾಂ ತೂಕದ ಒಣ ಗಾಂಜಾ ಮತ್ತು 350 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಕೃಷ್ಣಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಮಂಜುನಾಥ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.  ಈ ಸಂಬಂಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In two separate incidents in Bhadravati Nagar and Taluk, three persons were arrested by the police on charges of selling ganja.

Shimoga : Sudden visit of the Home Minister to the police station! ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ! Previous post shivamogga | ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ!
Mahatma Gandhi Job Guarantee Scheme Bachao Andolan from January 5 – CM Siddaramaiah ಜನವರಿ 5 ರಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವೋ ಆಂದೋಲನ – ಸಿಎಂ ಸಿದ್ದರಾಮಯ್ಯ Next post ಗ್ಯಾರಂಟಿ ಜಾರಿಯಿಂದಾಗಿ ಬಿಜೆಪಿ – ಜೆಡಿಎಸ್ ಗೆ ಸಮಾಧಾನವಿಲ್ಲದಂತಾಗಿದೆ : ಸಿಎಂ ಸಿದ್ದರಾಮಯ್ಯ