Ganja sale : 6 people arrested from Bhadravati, Mangalore, Chikkamagaluru districts ಗಾಂಜಾ ಮಾರಾಟ : ಭದ್ರಾವತಿ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳ 6 ಜನರ ಬಂಧನ!

crime news | ಗಾಂಜಾ ಮಾರಾಟ : ಭದ್ರಾವತಿ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳ 6 ಜನರ ಬಂಧನ!

ಭದ್ರಾವತಿ (bhadravati), ಅ. 29: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು 6 ಜನರನ್ನು ಬಂಧಿಸಿದ ಘಟನೆ, ಅ. 28 ರಂದು ಭದ್ರಾವತಿ ನಗರದ ಹೊಳೆಹೊನ್ನೂರು ಕ್ರಾಸ್ ನಿಂದ ಸೀಗೆಬಾಗಿ ಕಡೆ ಹೋಗುವ ರಸ್ತೆಯಲ್ಲಿ ನಡೆದಿದೆ.

ಮಂಗಳೂರು ಕೃಷ್ಣಾಪುರದ ನಿವಾಸಿ ನವೀನ್ ಯಾನೆ ನವೀನ್ ಬಾಬು ಬಿ (24), ಭದ್ರಾವತಿಯ ಕಾಳಿಂಗನಹಳ್ಳಿ ನವಾಸಿ ದರ್ಶನ್ (19), ಕಂಚಿಬಾಗಿಲು ನಿವಾಸಿ ವಿಷ್ಣುಗವಾಡೆ ಎಂ.ವಿ ಯಾನೆ ಬೆಣ್ಣೆ (24),

ಹೊಸಮನೆ ಬಡಾವಣೆ ನಿವಾಸಿಗಳಾದ ಮಂಜು ಯಾನೆ ಸಣ್ಣ ಮಂಜು (24), ಪ್ರಸಾದ್ ಎಸ್ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಸಿಡಕನಹಳ್ಳಿ ನಿವಾಸಿ ಸಚಿನ್ ಎಸ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 1 ಕೆಜಿ 300 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಚಂದ್ರಶೇಖರ ನಾಯ್ಕ್ ಮತ್ತವರ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

: On October 28, the police arrested 6 people on the charge of selling ganja to the public on the road from Holehonnur Cross to Seegebagi in Bhadravati Nagar.

CM Siddaramaiah says BJP-JDS are not satisfied due to implementation of guarantee ಗ್ಯಾರಂಟಿ ಜಾರಿಯಿಂದಾಗಿ ಬಿಜೆಪಿ - ಜೆಡಿಎಸ್ ಗೆ ಸಮಾಧಾನವಿಲ್ಲದಂತಾಗಿದೆ - ಸಿಎಂ ಸಿದ್ದರಾಮಯ್ಯ Previous post ಗ್ಯಾರಂಟಿ ಜಾರಿಯಿಂದಾಗಿ ಬಿಜೆಪಿ – ಜೆಡಿಎಸ್ ಗೆ ಸಮಾಧಾನವಿಲ್ಲದಂತಾಗಿದೆ : ಸಿಎಂ ಸಿದ್ದರಾಮಯ್ಯ
Death of beggars and anonymous persons in a row: Bengaluru Social Welfare Department official who arrived in Shimoga and collected information! ಸಾಲುಸಾಲು ಭಿಕ್ಷುಕರು, ಅನಾಮಧೇಯ ವ್ಯಕ್ತಿಗಳ ಸಾವು ಪ್ರಕರಣ : ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ! ವರದಿ : ಬಿ. ರೇಣುಕೇಶ್ b renukesha Next post ಸಾಲುಸಾಲು ಭಿಕ್ಷುಕರು, ಅನಾಮಧೇಯ ವ್ಯಕ್ತಿಗಳ ಸಾವು ಪ್ರಕರಣ : ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ!