Shivamogga: Suspicious death of a wild elephant! ಶಿವಮೊಗ್ಗ : ಕಾಡಾನೆಯ ಅನುಮಾನಾಸ್ಪದ ಸಾವು!

shimoga | ಶಿವಮೊಗ್ಗ : ಕಾಡಾನೆಯ ಅನುಮಾನಾಸ್ಪದ ಸಾವು!

ಶಿವಮೊಗ್ಗ (shivamogga), ನ. 5: ಶಿವಮೊಗ್ಗ ತಾಲೂಕಿನ ವೀರಗಾರನ ಭೈರನಕೊಪ್ಪದ ಜಮೀನೊಂದರ ಸಮೀಪ ಕಾಡಾನೆಯೊಂದು, ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಾಡಾನೆಗಳ ನಿಯಂತ್ರಣಕ್ಕೆಂದು ತೆಗೆಯಲಾಗಿದ್ದ ಗುಂಡಿಯಲ್ಲಿ, ಕಾಡಾನೆಯ ಮೃತದೇಹ ಮಂಗಳವಾರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಕಳೆದೆರೆಡು ದಿನಗಳ ಹಿಂದೆಯೇ ಆನೆ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೆ ಆನೆಯ ಸಾವಿಗೆ ಸ್ಪಷ್ಟ ಕಾರಣವೆನೆಂಬುವುದು ತಿಳಿದುಬರಬೇಕಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.

ನಿರಂತರ ದಾಳಿ : ಪುರದಾಳು, ಆಲದೇವರ ಹೊಸೂರು, ಗುಡ್ಡದ ಅರಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ತೋಟ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸುತ್ತಿವೆ ಎಂದು ರೈತರು ದೂರಿದ್ದರು.

ಈ ನಡುವೆ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ವರದಿಯ ನಂತರವಷ್ಟೆ ಆನೆಯ ಸಾವಿಗೆ ಸ್ಪಷ್ಟ ವಿವರಗಳು ಲಭ್ಯವಾಗಬೇಕಾಗಿದೆ.

An incident has taken place near a farm in veeragarana bairinakoppa in Shimoga taluk where a wild elephant has died in a suspicious condition.

Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Previous post shimoga | ಶಿವಮೊಗ್ಗ : ನ. 6 ರಂದು ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ?
shimoga | Shimoga Taluk SSLC Exam Result – Tehsildar Khadak Notice! ಶಿವಮೊಗ್ಗ ತಾಲೂಕಿನ ಎಸ್ಎಸ್ಎಲ್’ಸಿ ಪರೀಕ್ಷಾ ಫಲಿತಾಂಶ – ತಹಶೀಲ್ದಾರ್ ಖಡಕ್ ಸೂಚನೆ! Next post shimoga | ಶಿವಮೊಗ್ಗ ತಾಲೂಕಿನ SSLC ಪರೀಕ್ಷಾ ಫಲಿತಾಂಶ – ತಹಶೀಲ್ದಾರ್ ಖಡಕ್ ಸೂಚನೆ!