After Bangalore – Mysore and Hubballi special treatment facilities will also be available to patients at the Government Meggan Hospital in Shivamogga! ಬೆಂಗಳೂರು ಮೈಸೂರು ಹುಬ್ಬಳ್ಳಿ ನಂತರ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ಲಭ್ಯವಾಗಲಿದೆ ವಿಶೇಷ ಚಿಕಿತ್ಸಾ ಸೌಲಭ್ಯ!

shimoga | ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಾದ ಕಳ್ಳರ ಹಾವಳಿ..!

ಶಿವಮೊಗ್ಗ (shivamogga), ಡಿ. 2: ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ, ಪ್ರತಿನಿತ್ಯ ನೂರಾರು ಜನ ಆಗಮಿಸುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಬ್ಯಾಗ್ ಗಳಿಂದ ಚಿನ್ನಾಭರಣ, ನಗದು ಅಪಹರಿಸಿ ಪರಾರಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ!

ಆಸ್ಪತ್ರೆಯಲ್ಲಿ ಚೀಟಿ ಮಾಡಿಸುವ ವೇಳೆ ಹಾಗೂ ಜನಜಂಗುಳಿ ಹೆಚ್ಚಿರುವ ಸ್ಥಳಗಳಲ್ಲಿಯೇ, ರೋಗಿಗಳು ಹಾಗೂ ಮತ್ತವರ ಕಡೆಯವರ ಬಳಿಯಿಂದ ನಯವಂಚಕರು ನಗನಾಣ್ಯ ಅಪಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವುದು ಕಂಡುಬರುತ್ತಿದೆ.

ಇತ್ತೀಚೆಗೆ ಆಸ್ಪತ್ರೆಗೆ ಆಗಮಿಸಿದ ಮೂರು ಮಹಿಳೆಯರ ವ್ಯಾನಿಟಿ ಬ್ಯಾಗ್ ಗಳಿಂದ, ಚಿನ್ನಾಭರಣ ಹಾಗೂ ನಗದು ಅಪಹರಿಸಿದ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಮೂರು ಪ್ರಕರಣಗಳಲ್ಲಿಯೂ ಮಹಿಳೆಯರು ಚೀಟಿ ಮಾಡಿಸಲು ಕ್ಯೂನಲ್ಲಿ ನಿಂತುಕೊಂಡ ವೇಳೆ, ಅವರ ವ್ಯಾನಿಟಿ ಬ್ಯಾಗ್ ಗಳಲ್ಲಿದ್ದ ಚಿನ್ನಾಭರಣ – ನಗದು ಅಪಹರಿಸಿರುವುದು ಕಂಡುಬಂದಿದೆ.

ಪ್ರಕರಣವೊಂದರಲ್ಲಿ 44 ಗ್ರಾಂ ತೂಕದ 2. 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮತ್ತೊಂದು ಪ್ರಕರಣದಲ್ಲಿ 3 ಸಾವಿರ ನಗದು ಮತ್ತು ಕಳವು ಮಾಡಿದ ಎಟಿಎಂ ಕಾರ್ಡ್ ಮೂಲಕ 23 ಸಾವಿರ ನಗದು ಅಪಹರಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಲಕ್ಷಾಂತರ ರೂ. ಮೌಲ್ಯದ 70. 05 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ.

ಗಮನಹರಿಸಲಿ : ಮೆಗ್ಗಾನ್ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಕಳವು ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಅದೆಷ್ಟೊ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುವುದಿಲ್ಲ. ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ಕಳವು ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಆಸ್ಪತ್ರೆಗೆ ಆಗಮಿಸುವ ನಾಗರೀಕರು ದೂರುತ್ತಾರೆ.

ಹೆಚ್ಚು ಜನಜಂಗುಳಿ ಹಾಗೂ ಚೀಟಿ ಮಾಡಿಸಲು ಕ್ಯೂ ನಿಲ್ಲುವ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಭದ್ರತಾ ಸಿಬ್ಬಂದಿಗಳ ನಿಯೋಜನೆಯನ್ನು ಆಸ್ಪತ್ರೆ ಆಡಳಿತ ಮಂಡಳಿ ಮಾಡಬೇಕು. ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕ ಕಳ್ಳರ ವಿವರ ಕಲೆ ಹಾಕಿ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಪ್ರತಿನಿತ್ಯ ನೂರಾರು ಜನ ಆಗಮಿಸುವ ಆಸ್ಪತ್ರೆಯಲ್ಲಿ ಸುರಕ್ಷತೆಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಒತ್ತಾಯಿಸುತ್ತಾರೆ.

‘ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳವು ಕೃತ್ಯಗಳು ಹೆಚ್ಚಾಗಿರುವ ಬಗ್ಗೆ ತಮಗೆ ಅಧಿಕೃತ ಮಾಹಿತಿಯಿಲ್ಲ. ಒಂದು ಪ್ರಕರಣದ ಬಗ್ಗೆ ಮಾಹಿತಿಯಿದ್ದು, ಆ ಬಗ್ಗೆ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಆಸ್ಪತ್ರೆಗೆ ಆಗಮಿಸುವ ರೋಗಿಗಳು ಮತ್ತವರ ಕಡೆಯವರ ಸುರಕ್ಷತೆಗೆ ಆಸ್ಪತ್ರೆ ಆಡಳಿತ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಿದೆ. ಆಸ್ಪತ್ರೆ ಭದ್ರತಾ ಸಿಬ್ಬಂದಿಗಳಿಗೂ ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗುವುದು. ಜೊತೆಗೆ ಆಸ್ಪತ್ರೆಯ ಆಯಕಟ್ಟಿನ ಸ್ಥಳಗಳಲ್ಲಿ ನಾಗರೀಕರಿಗೆ ಎಚ್ಚರಿಕೆಯ ಫಲಕ ಹಾಕಲಾಗುವುದು. ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಸೂಚಿಸಲಾಗುವುದು’ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ತಿಮ್ಮಪ್ಪ ಅವರು ನ. 2 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪರಾಧ ಕೃತ್ಯಗಳು ವರದಿಯಾದ ವೇಳೆ, ಅಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲು ಪೊಲೀಸರು ಪರದಾಟ ನಡೆಸಬೇಕಾದ ದುಃಸ್ಥಿತಿಯಿದೆ! ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಗೆ ತೆರಳಿದ ವೇಳೆ, ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆಗೆ ಅಲ್ಲಿನ ಸಿಬ್ಬಂದಿಗಳು ಅವಕಾಶ ನೀಡುವುದಿಲ್ಲ.

ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಪತ್ರದೊಂದಿಗೆ ಆಗಮಿಸುವಂತೆ ಹೇಳುತ್ತಾರೆ. ಜೊತೆಗೆ ಆಸ್ಪತ್ರೆಯ ಪ್ರವೇಶ ದ್ವಾರ ಮೊದಲಾದೆಡೆ ಸಿಸಿ ಕ್ಯಾಮರಾ ಅಳವಡಿಸುಬೇಕಾಗಿದೆ. ಆಸ್ಪತ್ರೆ ಭದ್ರತಾ ಸಿಬ್ಬಂದಿಗಳಿಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡುವಂತೆ ಆಸ್ಪತ್ರೆ ಆಡಳಿತ ಸೂಚಿಸಬೇಕಾಗಿದೆ’ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.

One of the biggest government hospitals in the state, where hundreds of people visit every day, the threat of thieves has increased recently. It has come to light that incidents of stealing gold ornaments and cash from the bags of patients arriving at the hospital are increasing!

Re-investigation of Dharmasthala sowjanya case: What did CM Siddaramaiah say? ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Previous post bengaluru | ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್.ಐ.ಆರ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Shimoga : Heavy rain is forecast to continue! ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ! Next post shimoga rain | ಫೆಂಗಲ್ ಚಂಡಮಾರುತ ಎಫೆಕ್ಟ್ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ – ಆರೆಂಜ್ ಅಲರ್ಟ್ ಮುನ್ಸೂಚನೆ!