Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

bhadravati | ಭದ್ರಾವತಿ | ಶವ ಪತ್ತೆ – ಬಲಗೈ ಮೇಲಿದೆ ‘ಮಾದೇಶ’ ಹೆಸರಿನ ಹಚ್ಚೆ ಗುರುತು!

ಭದ್ರಾವತಿ (bhadravathi), ಏ. 11: ಅಪರಿಚಿತ ಪುರುಷನೋರ್ವನ ಶವ ಪತ್ತೆಯಾದ ಘಟನೆ, ಏ.10 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಯೋ ಕಚೇರಿ ಹಿಂಭಾಗದಲ್ಲಿ ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಏ. 11 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮಲಗಿದ್ದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದರು.

ಮೃತ ವ್ಯಕ್ತಿಗೆ ಸುಮಾರು 35 ರಿಂದ 40 ವರ್ಷ ವಯೋಮಾನವಿದೆ. 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.

ಬಲಗೈ ಮೇಲೆ ‘ಮಾದೇಶ’ ಎಂದು ಕನ್ನಡದಲ್ಲಿ ಬರೆದಿರುವ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಬಿಳಿ ಗೆರೆಗಳಿರುವ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಸದರಿ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Bhadravati, Apr. 11: The body of an unidentified man was found on Apr. 10 behind the Geo office under the Bhadravati Old City Police Station limit. The police department has given information about this in a press release issued on April 11. The person, who was lying down, was admitted to the Bhadravati Government Hospital, where the doctors who examined him confirmed that he was dead.

The police release stated that if the heirs of the said person are found, they are requested to contact Bhadravati Halenagar Police Station and provide information.

shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 11 ರ ತರಕಾರಿ ಬೆಲೆಗಳ ವಿವರ
Shivamogga | 20 years rigorous imprisonment: Rs. 75 thousand fine! ಶಿವಮೊಗ್ಗ | 20 ವರ್ಷ ಕಠಿಣ ಜೈಲು ಶಿಕ್ಷೆ : 75 ಸಾವಿರ ರೂ. ದಂಡ! Next post shimoga | ಶಿವಮೊಗ್ಗ : ಕೌಟಂಬಿಕ ದೌರ್ಜನ್ಯ ಪ್ರಕರಣ – ಪತಿಗೆ ಜೈಲು ಶಿಕ್ಷೆ!