bhadravati | Father and son drown in Bhadra Dam backwater! bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಸಾವು!

bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗನ ದಾರುಣ ಸಾವು!

ಭದ್ರಾವತಿ (bhadravathi), ಏ. 21: ಭದ್ರಾ ಜಲಾಶಯ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಮೃತಪಟ್ಟ ದಾರುಣ ಘಟನೆ, ಬಿಆರ್’ಪಿಯಲ್ಲಿ ಏ. 20 ರಂದು ನಡೆದಿದೆ.

ಭದ್ರಾವತಿ ನಗರದ ಭೂತನಗುಡಿ ನಿವಾಸಿ, ಫ್ಲೈವುಡ್ ಅಂಗಡಿಯೊಂದರ ಮಾಲೀಕರಾದ ಮೊಹಮ್ಮದ್ ಜಾಬೀರ್ (55) ಹಾಗೂ ಅವರ ಪುತ್ರ ಜಾವೇದ್ (15) ಮೃತಪಟ್ಟವರೆಂದು ಗುರುತಿಸಲಾಗಿದೆ.

ಭಾನುವಾರ ಜಾಬೀರ್ ಅವರು ಕುಟುಂಬದವರೊಂದಿಗೆ ಭದ್ರಾ ಜಲಾಶಯಕ್ಕೆ ವಿಹಾರಕ್ಕೆಂದು ಆಗಮಿಸಿದ್ದರು. ಊಟವಾದ ನಂತರ ಪುತ್ರ ಜಾವೇದ್ ಜಲಾಶಯದ ಹಿನ್ನೀರಿನಲ್ಲಿ ಈಜಾಡುತ್ತಿದ್ದ. ಈ ವೇಳೆ ಮುಳುಗಲಾರಂಭಿಸಿದ್ದಾನೆ.

ತಕ್ಷಣವೇ ಜಾಬೀರ್ ಅವರು ಮುಳುಗುತ್ತಿದ್ದ ಮಗನ ರಕ್ಷಣೆಗೆಂದು ನೀರಿಗೆ ಧುಮುಕಿದ್ದಾರೆ. ಆದರೆ ಅಪ್ಪ – ಮಗ ಇಬ್ಬರು ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು, ಸಂಜೆ ಹಿನ್ನೀರಿನಿಂದ ಬಾಲಕನ ಶವ ಪತ್ತೆ ಹಚ್ಚಿ ಹೊರ ತೆಗೆದಿದ್ದರು. ಮುಳುಗು ತಜ್ಞ ಮಲ್ಪೆ ಈಶ್ವರ್ ನೇತೃತ್ವದ ತಂಡವು ತಡರಾತ್ರಿ ವೇಳೆ ಜಾಬೀರ್ ಅವರ ಶವ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಶಿಲ್ಪಾ ಅವರು ಭೇಟಿ ನೀಡಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bhadravathi, Apr. 21: A tragic incident in which a father and son drowned in the backwaters of Bhadra reservoir took place in BRP on Apr. 20. The police and fire brigade, who reached the spot after learning about the incident, found the boy’s body from the backwater in the evening and pulled it out. A team led by Malpe Ishwar found and pulled out Jabir’s body late at night.

shimoga | Heavy rain: Plane lands in Belgaum instead of Shimoga! shimoga | ಭಾರೀ ಮಳೆ : ಶಿವಮೊಗ್ಗದ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಆದ ವಿಮಾನ! Previous post shimoga | ಭಾರೀ ಮಳೆ : ಶಿವಮೊಗ್ಗದ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಆದ ವಿಮಾನ!
Re-investigation of Dharmasthala sowjanya case: What did CM Siddaramaiah say? ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post bengaluru | ಬೆಂಗಳೂರು | ಜನಿವಾರ ಪ್ರಕರಣ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?