
bhadravati | ಭದ್ರಾವತಿ : ಕೊನೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ರೈಲ್ವೆ ಮೇಲ್ಸೇತುವೆ
ಭದ್ರಾವತಿ (bhadravathi), ಏ. 26: ಭದ್ರಾವತಿ ನಗರದ ಕಡದಕಟ್ಟೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಲಾಗುತ್ತಿದ್ದ ನೂತನ ಮೇಲ್ಸೇತುವೆಯು ಕೊನೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ.
ಏ. 26 ರಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು, ಟೇಪ್ ಕತ್ತರಿಸುವ ಮೂಲಕ ಮೇಲ್ಸೇತುವೆ ಉದ್ಘಾಟನೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ಕೆ ಸಂಗಮೇಶ್ವರ್, ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಬಲ್ಕೀಷ್ ಬಾನು, ಮುಖಂಡರಾದ ಮಂಗೋಟೆ ರುದ್ರೇಶ್, ಶಾರದಾ ಅಪ್ಪಾಜಿ ಸೇರಿದಂತೆ ಮೊದಲಾದವರಿದ್ದರು.
ವಿಳಂಬ : ಕೆಲ ವರ್ಷಗಳ ಹಿಂದೆ ಆರಂಭವಾದ ಮೇಲ್ಸೇತುವೆ ಕಾಮಗಾರಿಯು ವಿಳಂಬಗತಿಯಲ್ಲಿ ಸಾಗಿತ್ತು. ಇದರಿಂದ ಭದ್ರಾವತಿ – ಶಿವಮೊಗ್ಗ ನಡುವೆ ಸಂಚರಿಸುವ ವಾಹನ ಸವಾರರು ಸಂಕಷ್ಟ ಪಡುವಂತಾಗಿತ್ತು. ಮುಖ್ಯ ಬಸ್ ನಿಲ್ದಾಣ ತಲುಪಲು ಸುತ್ತಿಕೊಂಡು ಬರಬೇಕಾದ ದುಃಸ್ಥಿತಿಯಿತ್ತು.
ನಗರಸಭೆ ವ್ಯಾಪ್ತಿಯ ಬಂಡಾರಹಳ್ಳಿ, ಹೆಬ್ಬಂಡಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿತ್ತು. ಪರ್ಯಾಯ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು.
ಇದೀಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು, ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿರುವುದರಿಂದ ಕಡದಕಟ್ಟೆ ಮೂಲಕ ಸಂಚರಿಸುವ ವಾಹನಗಳ ಸವಾರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
Bhadravati, Apr. 26: The new flyover that was being constructed near the railway level crossing at Kadadakatte in Bhadravati city has finally been opened for vehicular traffic.
On April 26, Lok Sabha member B Y Raghavendra inaugurated the flyover by cutting the ribbon. A stage program was held later.