Bhadravati man lost lakhs of rupees by believing in Facebook ad! ಫೇಸ್’ಬುಕ್ ಜಾಹೀರಾತು ನಂಬಿ ಲಕ್ಷ ಲಕ್ಷ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!’

shimoga crime news | ಶಿವಮೊಗ್ಗ : ವಾಟ್ಸಾಪ್ ಗೆ ಬಂದ‌ ಸೈಬರ್ ವಂಚಕರ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!

ಶಿವಮೊಗ್ಗ (shivamogga), ಜು. 9: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂಬ ವಾಟ್ಸಾಪ್ ಗೆ ಬಂದ ವಂಚಕರ ಸಂದೇಶ ನಂಬಿದ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಬಿ ಬಿ ರಸ್ತೆಯ ನಿವಾಸಿ, 30 ವರ್ಷ ವಯೋಮಾನದ ವ್ಯಕ್ತಿಯೇ ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಒಟ್ಟಾರೆ 34,16,000 ರೂ.ಗಳನ್ನು ಸೈಬರ್ ವಂಚಕರು ವಂಚಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನೀದು ಘಟನೆ? : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಪಿರ್ಯಾದುದಾರರ ಮೊಬೈಲ್ ಫೋನ್ ವಾಟ್ಸಾಪ್ ಗೆ ಬಂದಿತ್ತು. 

ಇದನ್ನು ನಂಬಿದ ಪಿರ್ಯಾದುದಾರರು ವಿವಿಧ ಹಂತಗಳಲ್ಲಿ ವಂಚಕರ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡಿದ್ದಾರೆ. ನಂತರ ಹೂಡಿಕೆ ಮಾಡಿದ ಹಣವು ನೀಡದೆ, ಲಾಭಾಂಶವೂ ಕೊಡದೆ ವಂಚಿಸಲಾಗಿದೆ ಎಂದು ಪಿರ್ಯಾದುದಾರರು ಸಿಇಎನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Shivamogga, July 9: A person lost lakhs of rupees in Shivamogga city after believing a fraudulent message on WhatsApp claiming that investing in the stock market would yield high profits.

shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 9 ರ ತರಕಾರಿ ಬೆಲೆಗಳ ವಿವರ
Holehonnur : Yadehalli Grama Panchayat President and Vice President elected unopposed ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ - ಉಪಾಧ್ಯಕ್ಷರ ಅವಿರೋಧ ಆಯ್ಕೆ Next post Holehonnuru | ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರ ಅವಿರೋಧ ಆಯ್ಕೆ