Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!

shimoga | ಶಿವಮೊಗ್ಗ : ದರೋಡೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ!

ಶಿವಮೊಗ್ಗ (shivamogga), ಆಗಸ್ಟ್ 23: ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ನಗದು – ಮೊಬೈಲ್ ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ, ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಶಿವಮೊಗ್ಗದ ಕೆಳಗಿನ ತುಂಗಾನಗರ 2 ನೇ ಕ್ರಾಸ್ ನಿವಾಸಿ, ಗಾರೆ ಕೆಲಸ ಮಾಡುವ ಮೊಹಮ್ಮದ್ ತಬಾರಕ್ ಉಲ್ಲಾ ಯಾನೆ ತಪ್ಪಣ್ಣ (24) ಹಾಗೂ ಟಿಪ್ಪುನಗರ 5 ನೇ ಕ್ರಾಸ್ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುವ ಜಾಫರ್ ಸಾದಿಕ್ ಯಾನೆ ಟಿನ್ನರ್ ಯಾನೆ ನಜೀರ್ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳನ್ನು ಆಗಸ್ಟ್ 20 ರಂದು ಬಂಧಿಸಲಾಗಿದೆ. ಬಂಧಿತರಿಂದ ಕೋಟು, ಗೌನ್, 10 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಆಗಸ್ಟ್ 23 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ಜಯನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಸಿದ್ದೇಗೌಡ, ಪಿಎಸ್ಐ ಕೋಮಲ, ಎಎಸ್ಐ ಕರಿಬಸಪ್ಪ, ಸಿಬ್ಬಂದಿಗಳಾದ ನಾಗರಾಜ್, ವಸಂತ, ಸಚಿನ್, ವೀರೇಶ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆ ಹಿನ್ನೆಲೆ : ಬೊಮ್ಮನಕಟ್ಟೆ ಬಡಾವಣೆ ನಿವಾಸಿಯೋರ್ವರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ರವೀಂದ್ರನಗರದ ಬಳಿ 18/6/2025 ರಂದು ಆಗಮಿಸುತ್ತಿದ್ದ ವೇಳೆ, ಆರೋಪಿಗಳು ಇವರ ಮೇಲೆ ಹಲ್ಲೆ ನಡೆಸಿ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದರು.

Shivamogga, August 23: The Jayanagar police station in Shivamogga have succeeded in arresting two accused on charges of assaulting a person, stealing cash and a mobile phone and fleeing.

Two people from Bhadravati sentenced to death! ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ! Previous post bhadravati | ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ!
shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 24 ರ ತರಕಾರಿ ಬೆಲೆಗಳ ವಿವರ