shimoga | ಶಿವಮೊಗ್ಗ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ 1000 ಕ್ಕೂ ಅಧಿಕ ಸಿಸಿ ಕ್ಯಾಮರಾಗಳ ಅಳವಡಿಕೆ : ಪೊಲೀಸರ ಹದ್ದಿನ ಕಣ್ಣು!
ಶಿವಮೊಗ್ಗ (shivamogga), ಆಗಸ್ಟ್ 28: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳಲ್ಲಿ, 1000 ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಪೊಲೀಸ್ ಇಲಾಖೆ ಅಳವಡಿಸಿದೆ.
ಈ ಕುರಿತಂತೆ ಆಗಸ್ಟ್ 28 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ‘ಸಾರ್ವಜನಿಕರ ಸುರಕ್ಷತೆ, ಮುಂಜಾಗ್ರತೆ, ಪ್ರಮುಖ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಸಂಬಂಧ ಮತ್ತು ಯಾವುದೇ ಘಟನೆ ಜರುಗಿದರೂ ಕೂಡಲೇ ಪತ್ತೆ ಹಚ್ಚುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
‘ಸೂಕ್ಷ್ಮ ಸ್ಥಳಗಳು, ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಿ ಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಸದರಿ ಕ್ಯಾಮರಾಗಳು ಸಣ್ಣಪುಟ್ಟ ಚಲನವಲನ, ಚಟುವಟಿಕೆಗಳನ್ನು ಕೂಡ ಸೆರೆ ಹಿಡಿಯಲಿವೆ. ಸಂಭಾಷಣೆಯನ್ನು ಕೂಡ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿವೆ. ಜೊತೆಗೆ ನೇರವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಹೊಂದಿವೆ’ ಎಂದು ಪೊಲೀಸ್ ಇಲಾಖೆ ಹೇಳಿದೆ.
ಕ್ಯಾಮರಾಗಳಲ್ಲಿ ಸಂಗ್ರಹವಾಗುವ ದೃಶ್ಯಾವಳಿಯನ್ನು ಲೈವ್ ಸ್ಟ್ರೀಮಿಂಗ್ ಮುಖಾಂತರ ನೋಡಲಾಗುತ್ತದೆ. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು, ಬೀಟ್ ಸಿಬ್ಬಂದಿಗಳು, ಕಂಟ್ರೋಲ್ ರೂಂನಲ್ಲಿಯೂ ಸಹ ಮೇಲ್ವಿಚಾರಣೆ ಮಾಡಬಹುದಾಗಿದೆ’ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
Shivamogga, August 28: In the wake of the Ganesh festival and Eid Milad, the Police Department has installed more than 1000 CCTV cameras in sensitive and important places in Shivamogga district as a precautionary measure.
