Shivamogga: Snake hidden inside shoe...! ಶಿವಮೊಗ್ಗ : ಶೂ ಒಳಗೆ ಅಡಗಿದ್ದ ಹಾವು...!

shimoga | ಶಿವಮೊಗ್ಗ : ಶೂ ಒಳಗೆ ಅಡಗಿದ್ದ ಹಾವು…!

ಶಿವಮೊಗ್ಗ (shivamogga), ಸೆಪ್ಟೆಂಬರ್ 6: ಮನೆಯ ಚಪ್ಪಲಿ ಸ್ಟ್ಯಾಂಡ್ ಬಳಿ ಬಿಡಲಾಗಿದ್ದ ಶೂ ಒಳಗೆ ಹಾವೊಂದು ಅಡಗಿಕೊಂಡಿದ್ದ ಘಟನೆ, ಶಿವಮೊಗ್ಗದ ವಿದ್ಯಾನಗರ ಕಂಟ್ರಿ ಕ್ಲಬ್ ರಸ್ತೆಯ ಮನೆಯೊಂದರ ಬಳಿ ನಡೆದಿದೆ.

ವೆಂಕಟೇಶ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಮನೆ ಹೊರಾಂಗಣದಲ್ಲಿದ್ದ ಚಪ್ಪಲಿ ಸ್ಟ್ಯಾಂಡ್ ಬಳಿ ಬಿಡಲಾಗಿದ್ದ ಶೂ ಒಳಗೆ ‘ಕ್ಯಾಟ್ ಸ್ನೇಕ್’ ವರ್ಗದ ಹಾವು ಸೇರಿಕೊಂಡಿತ್ತು.

ಶೂ  ಒಳಗೆ ಹಾವು ಸೇರಿಕೊಂಡಿರುವುದನ್ನು ಗಮನಿಸಿದ ಕುಟುಂಬದವರು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುರಕ್ಷಿತವಾಗಿ ಹಾವನ್ನು ಸಂರಕ್ಷಿಸಿದ್ದಾರೆ.

‘ಸದರಿ ಹಾವು ಕ್ಯಾಟ್ ಸ್ನೇಕ್ ಆಗಿದ್ದು, ವಿಷ ರಹಿತ ವರ್ಗಕ್ಕೆ ಸೇರಿದ್ದಾಗಿದೆ. ಮಳೆಗಾಲದ ವೇಳೆ ಹಾವುಗಳು ಬೆಚ್ಚಗಿನ ಜಾಗ ಹುಡುಕಿಕೊಂಡು ಬರುತ್ತವೆ. ಮನೆ ಹೊರಭಾಗ ಬಿಟ್ಟಿರುವ ಶೂಗಳನ್ನು ಹಾಕಿಕೊಳ್ಳುವ ವೇಳೆ, ಪರಿಶೀಲಿಸಿ ಹಾಕಿಕೊಳ್ಳಬೇಕು’ ಎಂದು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು  ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga, September 6: An incident occurred near a house on Vidyanagar Country Club Road in Shivamogga where a snake was found hiding inside a shoe left near the house’s slipper stand. The family, who noticed the snake inside the shoe, informed reptile conservationist Snake Kiran. Kiran arrived at the scene and safely rescued the snake.

shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 4 ರ ತರಕಾರಿ ಬೆಲೆಗಳ ವಿವರ
Shivamogga | Potholes on the district highway: Is the PWD paying attention? ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ? Next post shimoga | ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ?