Shivamogga | Potholes on the district highway: Is the PWD paying attention? ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ?

shimoga | ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ?

ಶಿವಮೊಗ್ಗ (shivamogga), ಸೆಪ್ಟೆಂಬರ್ 6: ಶಿವಮೊಗ್ಗ ನಗರದ ಹೊರವಲಯ ಗುರುಪುರ – ಶೆಟ್ಟಿಹಳ್ಳಿ ನಡುವಿನ ಜಿಲ್ಲಾ ಹೆದ್ದಾರಿಯ ಹಲವೆಡೆ ಗುಂಡಿ-ಗೊಟರು ಬಿದ್ದಿದ್ದು, ಸುಗಮ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

ಹಸೂಡಿ ಫಾರಂ ಗ್ರಾಮದ ದೊಡ್ಡ ಕೆರೆ ಏರಿ ಸಮೀಪ ಹಾಗೂ ಜಾಕಟೆಕಲ್ ಹತ್ತಿರ, ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿ – ಗೊಟರು ಬಿದ್ದಿವೆ. ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಸ್ತೆ ಅವ್ಯವಸ್ಥೆ ಕಾರಣದಿಂದ ರಾತ್ರಿ ವೇಳೆ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಆದರೆ ಇಲ್ಲಿಯವರೆಗೂ ರಸ್ತೆ ಅವ್ಯವಸ್ಥೆ ಸರಿಪಡಿಸಲು ಪಿಡಬ್ಲ್ಯೂಡಿ ಕ್ರಮಕೈಗೊಂಡಿಲ್ಲ. ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇನ್ನಾದರೂ ಪಿಡಬ್ಲ್ಯೂಡಿ ಇಲಾಖೆ ರಸ್ತೆ ಅವ್ಯವಸ್ಥೆ ಸರಿಪಡಿಲು ಅಗತ್ಯ ಕ್ರಮಕೈಗೊಂಡು, ಸುಗಮ ಜನ – ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Shivamogga, September 6: Local villagers have complained that potholes have appeared at many places on the district highway between Gurupura and Shettihalli on the outskirts of Shivamogga city, making smooth movement of people and vehicles difficult

Shivamogga: Snake hidden inside shoe...! ಶಿವಮೊಗ್ಗ : ಶೂ ಒಳಗೆ ಅಡಗಿದ್ದ ಹಾವು...! Previous post shimoga | ಶಿವಮೊಗ್ಗ : ಶೂ ಒಳಗೆ ಅಡಗಿದ್ದ ಹಾವು…!
Soraba: A house collapsed in Kamarur village! ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ! Next post soraba news | ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ!