Chaos at R'ML Nagar Park in Shimoga - Is the municipal administration paying attention? ಶಿವಮೊಗ್ಗದ ಆರ್’ಎಂಎಲ್ ನಗರ ಪಾರ್ಕ್ ಅವ್ಯವಸ್ಥೆ – ಗಮನಹರಿಸುವುದೆ ಪಾಲಿಕೆ ಆಡಳಿತ?

shimoga | ಶಿವಮೊಗ್ಗದ ಆರ್’ಎಂಎಲ್ ನಗರ ಪಾರ್ಕ್ ಅವ್ಯವಸ್ಥೆ – ಗಮನಹರಿಸುವುದೆ ಪಾಲಿಕೆ ಆಡಳಿತ?

ಶಿವಮೊಗ್ಗ (shivamogga), ಸೆಪ್ಟೆಂಬರ್ 9: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಆರ್.ಎಂ.ಎಲ್ ನಗರ ಬಡಾವಣೆಯ, ಅಲ್ ಮಹಮೂದ್ ಶಿಕ್ಷಣ ಸಂಸ್ಥೆ ಸಮೀಪದ ಸಾರ್ವಜನಿಕ ಉದ್ಯಾನವನ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಥಳೀಯ ನಾಗರೀಕರು ದೂರಿದ್ದಾರೆ.

ಉದ್ಯಾನವನದಲ್ಲಿ ಗಿಡಗಂಟೆ ಬೆಳೆದುಕೊಂಡಿದೆ. ವಿದ್ಯುತ್ ದೀಪಗಳು ಹಾಳಾಗಿವೆ. ಕಸದ ರಾಶಿ ಬಿದ್ದಿದೆ. ದುರ್ನಾತ ಬೀರುತ್ತಿದೆ. ಹಂದಿ, ನಾಯಿಗಳ ಆವಾಸ ಸ್ಥಾನವಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.  

ಕಳೆದ ಹಲವು ತಿಂಗಳುಗಳಿಂದ ಉದ್ಯಾನವನ ಸ್ವಚ್ಛತೆಗೆ ಪಾಲಿಕೆ ಆಡಳಿತ ಕ್ರಮಕೈಗೊಂಡಿಲ್ಲ. ಸೂಕ್ತ ನಿರ್ವಹಣೆಯ ಕೊರತೆಯಿಂದ ಅವ್ಯವಸ್ಥೆಯ ಪ್ರಮಾಣ ಹೆಚ್ಚಾಗುವಂತಾಗಿದೆ ಎಂದು ನಾಗರೀಕರು ದೂರಿದ್ದಾರೆ.

ಸದರಿ ಉದ್ಯಾನವನದಲ್ಲಿ ಎಲ್ಲ ವಯೋಮಾನದ ನಾಗರೀಕರು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಆದರೆ ಅವ್ಯವಸ್ಥೆಯ ಕಾರಣದಿಂದ ಉದ್ಯಾನವನಕ್ಕೆ ಆಗಮಿಸುವ ನಾಗರೀಕರ ಸಂಖ್ಯೆ ಕಡಿಮೆಯಾಗಿದೆ.

ತಕ್ಷಣವೇ ಮಹಾನಗರ ಪಾಲಿಕೆ ಆಡಳಿತ ಉದ್ಯಾನವನದ ಅವ್ಯವಸ್ಥೆ ಸರಿಪಡಿಸಲು ಕಾಲಮಿತಿಯೊಳಗೆ ಕ್ರಮಕೈಗೊಂಡು, ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

Shivamogga, September 9: Local citizens have complained that the public park near Al Mahmood Educational Institute in RML Nagar Layout under the jurisdiction of Shivamogga Municipal Corporation has become a place of chaos.

Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ Previous post shimoga | power cut news | ಶಿವಮೊಗ್ಗದ ಯಾವೆಲ್ಲ ಬಡಾವಣೆಗಳಲ್ಲಿ ಸೆಪ್ಟೆಂಬರ್ 10 ರಂದು ವಿದ್ಯುತ್ ಇರಲ್ಲ?
Shivamogga: Abbalagere Gram Panchayat administration bans child marriage, organizes awareness program on POCSO Acts ಶಿವಮೊಗ್ಗ : ಅಬ್ಬಲಗೆರೆ ಗ್ರಾಪಂ ಆಡಳಿತದಿಂದ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ Next post shimoga | ಶಿವಮೊಗ್ಗ : ಅಬ್ಬಲಗೆರೆ ಗ್ರಾಪಂ ಆಡಳಿತದಿಂದ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ