
caste survey | shimoga | ಜಾತಿ ಸಮೀಕ್ಷೆ : ಶಿವಮೊಗ್ಗ ಅಗಮುಡಿ ಸಂಘದ ಪ್ರಕಟಣೆಯೇನು?
ಶಿವಮೊಗ್ಗ (shivamogga), ಸೆಪ್ಟೆಂಬರ್ 21: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯದಲ್ಲಿ, ಅಗಮುಡಿ ಸಮಾಜ ಬಾಂಧವರು ಗಣತಿದಾರರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಅಗಮುಡಿ ಸಮಾಜ ಸೇವಾ ಸಂಘ ಮನವಿ ಮಾಡಿದೆ.
ಈ ಕುರಿತಂತೆ ಸಂಘಟನೆಯ ಅಧ್ಯಕ್ಷರಾದ ಎನ್ ಮಂಜುನಾಥ್ ಹಾಗೂ ಕಾರ್ಯದರ್ಶಿ ವಿ ಮಂಜುನಾಥ್ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಯ ಕುರಿತಂತೆ ಅಗಮುಡಿ ಸಂಘವು ಸಮಾಜದ ಮುಖಂಡರ ಜೊತೆ ವಿಸ್ತೃತವಾಗಿ ಚರ್ಚಿಸಿದೆ. ಸಮೀಕ್ಷೆ ವೇಳೆ ಸಮಾಜದವರು ನೀಡಬೇಕಾದ ವಿವರದ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ನಮೂದಿಸಬೇಕು. ಜಾತಿ ಕಾಲಂನಲ್ಲಿ ‘ಅಗಮುಡಿ’ ಎಂದು ಬರೆಯಿಸಬೇಕು. ಉಪ ಜಾತಿ ಕಾಲಂನಲ್ಲಿ ‘ಇಲ್ಲ’ವೆಂದು ಮಾಹಿತಿ ನೀಡುವಂತೆ ಸಂಘಟನೆ ತಿಳಿಸಿದೆ.
ಸಮೀಕ್ಷೆ ವೇಳೆ 60 ಪ್ರಶ್ನೆಗಳ ವೈಯಕ್ತಿಕ ಮಾಹಿತಿ ಕೇಳಲಾಗುತ್ತಿದ್ದು, ಮಾಹಿತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲವಾಗಿದೆ. ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ‘ಹೌದು’ ಎಂದು, ಇಲ್ಲದಿದ್ದರೆ ‘ಇಲ್ಲ’ ಎಂದು ಬರೆಯಿಸಿ. ಮಾತೃಭಾಷೆ ಕಾಲಂನಲ್ಲಿ ‘ತಮಿಳು’ ಎಂದು ಬರೆಯಿಸುವಂತೆ ಸಂಘಟನೆ ಸಲಹೆ ನೀಡಿದರು.
ಏನಾದರೂ ಗೊಂದಲವಿದ್ದರೆ ಸಂಘದ ಕಚೇರಿಯ ಮಾಹಿತಿ ಕೇಂದ್ರ ಹಾಗೂ ಸಹ ಕಾರ್ಯದರ್ಶಿಗಳಾದ ಎಂ ಆನಂದ್ ಅವರ ಮೊಬೈಲ್ ಸಂಖ್ಯೆ : 94481 – 23695 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, September 21: The Agamudi Social Service Association has appealed to the Agamudi community members to cooperate by providing appropriate information to the census takers in the survey of the social and educational conditions of citizens conducted by the Karnataka State Backward Classes Commission.