ಶಿವಮೊಗ್ಗ : ಕೊನೆಗೂ ಬೋನಿಗೆ ಬಿದ್ದ ಗಂಡು ಚಿರತೆ..!
ಶಿವಮೊಗ್ಗ, ಆ. 19: ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದ ಹೊರವಲಯದಲ್ಲಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

‘ಪ್ರಸ್ತುತ ಬೋನಿಗೆ ಬಿದ್ದಿರುವ ಚಿರತೆಗೆ ಸರಿಸುಮಾರು 7 ವರ್ಷ ವಯೋಮಾನವಿದೆ. ಚಿರತೆಯನ್ನು ತ್ಯಾವರೆಕೊಪ್ಪ ಲಯನ್ ಸಫಾರಿಯಲ್ಲಿಡಲಾಗಿದ್ದು, ಇದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಗುವುದು’ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಕಳೆದ ಕೆಲ ದಿನಗಳ ಹಿಂದೆ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿತ್ತು. ಘಟನೆಯ ನಂತರ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಂಡಿತ್ತು. ಇದಕ್ಕಾಗಿ ಮೈಸೂರಿನಿಂದ ವಿಶೇಷ ತಂಡ ಕೂಡ ಆಗಮಿಸಿತ್ತು.

ಕಳೆದ ಹಲವು ದಿನಗಳಿಂದ ಬಿಕ್ಕೋನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸುತ್ತಮುತ್ತ ಚಿರತೆ ಸೆರೆಗೆ ಅರಣ್ಯ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿತ್ತು. ಹಲವೆಡೆ ಕ್ಯಾಮರಾಗಳನ್ನು ಅಳವಡಿಸಿ ಚಿರತೆಯ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಇದೀಗ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಶಂಕರ ವಲಯದ ಆರ್.ಎಫ್.ಓ ಸುಧಾಕರ್, ಡಿ.ಆರ್.ಎಫ್.ಓ ಪಾಂಡುರಂಗ, ಇಫ್ತೀಕರ್, ಉಮೇಶ್ ನಾಯ್ಕ್, ಹನುಮಂತು ಮೊದಲಾದವರು ಭಾಗಿಯಾಗಿದ್ದರು.
More Stories
children’s day | ಮಕ್ಕಳ ದಿನಾಚರಣೆ ನಿಮಿತ್ತ ವಿಶೇಷ ಲೇಖನ | ‘ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಜವಾಬ್ದಾರಿ…’
children’s day | Special article on Children’s Day “Protection of children’s rights is society’s responsibility…”
ಮಕ್ಕಳ ದಿನಾಚರಣೆ ನಿಮಿತ್ತ ವಿಶೇಷ ಲೇಖನ | ‘ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಜವಾಬ್ದಾರಿ…’
Author: Tajuddin Khan – President – Child Welfare Committee – Shivamogga
ಲೇಖಕರು : ತಾಜುದ್ದೀನ್ ಖಾನ್ – ಅಧ್ಯಕ್ಷರು – ಮಕ್ಕಳ ಕಲ್ಯಾಣ ಸಮಿತಿ – ಶಿವಮೊಗ್ಗ
shimoga | job news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರು – ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Applications are invited for the post of Anganwadi workers and helpers in various places in Shivamogga district.
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರು – ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 14 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for November 14 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 14 ರ ತರಕಾರಿ ಬೆಲೆಗಳ ವಿವರ
Thirthahalli news | ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ!
A young man from Keegadi village in Thirthahalli has gone missing!
ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ!
thirthahalli news | ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ಯುವತಿ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
thirthahalli news | Young woman from Hegalathi village in Thirthahalli goes missing – Police appeal for help in finding her
ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ಯುವತಿ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
shimoga | drinking water | ಶಿವಮೊಗ್ಗ : ನವೆಂಬರ್ 14 – 15 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!
Shivamogga: Disruption in drinking water supply on November 14th – 15th!
ಶಿವಮೊಗ್ಗ : ನವೆಂಬರ್ 14 – 15 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!
