hosanagara | The tragic death of a woman who was bitten by a dog! ನಾಯಿ ಕಡಿತಕ್ಕೊಳಗಾಗಿದ್ದ ಮಹಿಳೆಯ ದುರಂತ ಸಾವು

hosanagara | ಬೀದಿ ನಾಯಿ ಕಡಿತ : ಮಹಿಳೆಯ ದುರಂತ ಸಾವು!

ಶಿವಮೊಗ್ಗ (shivamogga), ಆ. 24: ನಾಯಿ ಕಡಿತಕ್ಕೊಳಗಾಗಿ (dog bite) ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಆ. 23 ರಂದು ನಡೆದಿದೆ.

ಹೊಸನಗರ ಪಟ್ಟಣದ (hosanagara town) ಎಂ ಗುಡ್ಡೇಕೊಪ್ಪದ ನಿವಾಸಿ ಸಂಗೀತ (38) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರ ಪತಿ ಮೃತರಾಗಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ.

ಕಳೆದ ಸರಿಸುಮಾರು 2 ತಿಂಗಳ ಹಿಂದೆ ಇವರು ತೋಟಕ್ಕೆ ಹೋಗಿ ಬರುವಾಗ, ಬೀದಿ ನಾಯಿಯೊಂದು (stray dog) ಕಚ್ಚಿದೆ (bitten by a stray dog). ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ (rabies injection) ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.

ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿತ್ತು. ಹೊಸನಗರ ಆಸ್ಪತ್ರೆಗೆ (hosanagara govt hospital) ದಾಖಲಿಸಿದ್ದು, ಈ ವೇಳೆ ನಾಯಿ ಕಡಿತದಿಂದ ರೇಬೀಸ್(rabies) ಉಲ್ಬಣಿಸಿರುವುದು ಪತ್ತೆಯಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (shimoga govt meggan hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ (hosanagara police station) ಪ್ರಕರಣ ದಾಖಲಾಗಿದೆ.

Murder : Life sentence for two women – 5 years rigorous imprisonment for three youths! ಕೊಲೆ ಪ್ರಕರಣ : ಇಬ್ಬರು ಮಹಿಳೆಯರಿಗೆ ಜೀವಾವಧಿ – ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ! Previous post shimoga | ಕೊಲೆ : ಇಬ್ಬರು ಮಹಿಳೆಯರಿಗೆ ಜೀವಾವಧಿ – ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!
'It is a tragedy that the educated people are increasingly becoming casteists' : CM Siddaramaiah ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ : ಸಿಎಂ ಸಿದ್ದರಾಮಯ್ಯ Next post bengaluru | ‘ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ’ : ಸಿಎಂ ಸಿದ್ದರಾಮಯ್ಯ