Police raid on Andar-Bahar Ispeet gambling places of Hosnagar Tirthahalli taluks: 18 people arrested! ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಅಂದರ್ – ಬಾಹರ್ ಇಸ್ಪೀಟ್ ಜೂಜು ಸ್ಥಳಗಳ ಮೇಲೆ ಪೊಲೀಸರ ದಾಳಿ : 18 ಜನರ ಬಂಧನ!

police raid | ಹೊಸನಗರ, ತೀರ್ಥಹಳ್ಳಿ ತಾಲೂಕುಗಳ ಅಂದರ್ – ಬಾಹರ್ ಇಸ್ಪೀಟ್ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ!

ಹೊಸನಗರ / ತೀರ್ಥಹಳ್ಳಿ, ಸೆ. 27: ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಸೆ. 26 ರಂದು ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಅಂದರ್ – ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಒಟ್ಟಾರೆ 18 ಜನರನ್ನು ಬಂಧಿಸಿದ ಘಟನೆ ನಡೆದಿದೆ.

ಹೊಸನಗರ ವರದಿ : ತಾಲೂಕಿನ ಮಾರುತಿಪುರ ಗ್ರಾಮದ ಹಳೇ ಬಾಣಿಗ ರಸ್ತೆಯ ಬಳಿ ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ, 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 17,640 ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ವರದಿ : ತಾಲೂಕಿನ ಮುಳಬಾಗಿಲು ಗ್ರಾಮದ ಸರ್ಕಾರಿ ಪ್ಲ್ಯಾಂಟೇಷನ್ ನಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಖಚಿತ ವರ್ತಮಾನದ ಮೇರೆಗೆ, ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಜೂಜಾಟಕ್ಕೆ ಬಳಸಿದ್ದ 13 ಸಾವಿರ ನಗದು, ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosnagar / Thirthahalli : In Hosnagar and thirthahalli talukas In two separate incidents on the 26th, the police raided Andar-Bahar Ispeet gambling dens and arrested a total of 18 people.

FIR against CM Siddaramaiah : Case against whom? Which Act? ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್.ಐ.ಆರ್ : ಯಾರೆಲ್ಲ ವಿರುದ್ದ ಕೇಸ್? ಯಾವ್ಯಾವ ಕಾಯ್ದೆ? Previous post BREAKING NEWS | ಸಿದ್ದರಾಮಯ್ಯ ವಿರುದ್ದ FIR  : ಯಾರೆಲ್ಲ ವಿರುದ್ದ ಕೇಸ್? ಯಾವ್ಯಾವ ಕಾಯ್ದೆ?
Shimoga: In which areas will there be no electricity on January 31? shimoga | ಶಿವಮೊಗ್ಗ : ಯಾವೆಲ್ಲ ಏರಿಯಾಗಳಲ್ಲಿ ಜ. 31 ರಂದು ವಿದ್ಯುತ್ ಇರಲ್ಲ? Next post shimoga power cut news | ಶಿವಮೊಗ್ಗ : ಸೆ. 29 ರಂದು 50 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!