Theft in Bhadravati VISL factory : Two arrested! ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಳ್ಳತನ : ಇಬ್ಬರು ಅರೆಸ್ಟ್!

bhadravati news | ಭದ್ರಾವತಿ VISL ಕಾರ್ಖಾನೆಯಲ್ಲಿ ಕಳವು ಮಾಡಿದ್ದವರು ಯಾರು?

ಭದ್ರಾವತಿ (bhadravati), ಅ. 5: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯಲ್ಲಿ ನಡೆದಿದ್ದ ತಾಮ್ರದ ವೈಂಡಿಂಗ್ ವೈರ್ ಕಳ್ಳತನಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಭದ್ರಾವತಿ ನ್ಯೂ ಟೌನ್ ಠಾಣೆ (new town police station) ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಭದ್ರಾವತಿಯ ಹೊಸ ಕೋಡಿಹಳ್ಳಿ ಗ್ರಾಮ ದೇವರನರಸೀಪುರದ ನಿವಾಸಿ ವೆಂಕಟೇಶ ಯಾನೆ ಬುಡ್ಡಾ (29) ಹಾಗೂ ಎಕ್ಸಿನಾ ಕಾಲೋನಿ ನಿವಾಸಿ ಮುನೀರ್ ಜಾನ್ ಯಾನೆ ತಿಕಲ (36) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ 36,500 ರೂ. ಮೌಲ್ಯದ 37 ಕೆಜಿ ತೂಕದ ತಾಮ್ರದ ತಂತಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಪ್ಯಾಸೆಂಜರ್ ಆಟೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್ಪಿ ನಾಗರಾಜ್, ನಗರ ವೃತ್ತದ ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲಕುಮಾ‌ರ್ ಮೇಲ್ವಿಚಾರಣೆಯಲ್ಲಿ ನ್ಯೂ ಟೌನ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ ಪಿ, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ಸಿ ಹೆಚ್ ಸಿ ನವೀನ್, ಸಿಪಿಸಿ ಪ್ರಸನ್ನರವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

ಕಳವು : 08-09-2024 ರಂದು ರಾತ್ರಿ ವಿಐಎಸ್ಎಲ್ ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕಲ್ ವರ್ಕ ಶಾಪ್ ರಿಪೇರಿ ಮಾಡಲು ತಂದಿದ್ದ, ವೆಲ್ಡಿಂಗ್ ಮಷಿನ್ ನಲ್ಲಿದ್ದ 35,000 ರೂ. ಬೆಲೆ ಬಾಳುವ  50 ಕೆ ಜಿ ತೂಕದ ತಾಮ್ರದ ವೈಂಡಿಂಗ್ ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್ ಅವರು ಪೊಲೀಸರಿಗೆ ದೂರು ನೀಡಿದ್ದರು.

In connection with the theft of copper winding wire in Bhadravati VISL factory, New Town police have arrested two accused.

Mahatma Gandhi Job Guarantee Scheme Bachao Andolan from January 5 – CM Siddaramaiah ಜನವರಿ 5 ರಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವೋ ಆಂದೋಲನ – ಸಿಎಂ ಸಿದ್ದರಾಮಯ್ಯ Previous post ರಾಜಕಾರಣದತ್ತ ಮುಖ ಹಾಕದ ಪತ್ನಿಯ ವಿರುದ್ದ ಆರೋಪ : ಸಿದ್ದರಾಮಯ್ಯ ಬೇಸರ
Citizens of Shimoga beware...! Dangerous sale of Chinese garlic : sudden attack by a team of officials!! ಶಿವಮೊಗ್ಗ ನಾಗರೀಕರೇ ಎಚ್ಚರ…! ಅಪಾಯಕಾರಿ ಚೀನಾ ಬೆಳ್ಳುಳ್ಳಿ ಮಾರಾಟ ಶಂಕೆ : ಅಧಿಕಾರಿಗಳ ತಂಡದ ದಿಢೀರ್ ದಾಳಿ!! Next post shimoga | ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ : ರಾಜ್ಯಾದ್ಯಂತ ಸದ್ದು – ನಾಗರೀಕರಲ್ಲಿ ಭಾರೀ ಸಂಚಲನ!