Man stabbed in Malavagoppa, Shivamogga city – Accused flees! ಶಿವಮೊಗ್ಗ ನಗರದ ಮಲವಗೊಪ್ಪದಲ್ಲಿ ವ್ಯಕ್ತಿಗೆ ಚೂರಿ ಇರಿತ – ಆರೋಪಿ ಪರಾರಿ

hosanagara | ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!

ಶಿವಮೊಗ್ಗ (shivamogga), ಸೆಪ್ಟೆಂಬರ್ 12: ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಡೆದಿದೆ.

ದೇವರಾಜ (47) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ನಾಡ ಬಂದೂಕು ಹಿಡಿದುಕೊಂಡು ದೇವರಾಜ ಅವರು  ಮನೆಯ ಮೆಟ್ಟಿಲು ಹತ್ತುವ ವೇಳೆ, ಆಕಸ್ಮಿಕವಾಗಿ ನಾಡ ಬಂದೂಕಿನ ಟ್ರಿಗರ್ ಒತ್ತಿದ್ದಾರೆ.

ಇದರಿಂದ ಸಿಡಿದ ಗುಂಡು ಹಣೆಗೆ ತಗುಲಿ ದೇವರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುಂಡಿನ ಸದ್ದು ಕೇಳಿ, ಅಡುಗೆ ಮಾಡುತ್ತಿದ್ದ ಪತ್ನಿ ಹಾಗೂ ಕೊಠಡಿಯಲ್ಲಿ ಓದಿಕೊಳ್ಳುತ್ತಿದ್ದ ಮಕ್ಕಳು ಹೊರ ಓಡಿ ಬಂದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ದೇವರಾಜ ಬಿದ್ದಿರುವುದು ಕಂಡುಬಂದಿದೆ.

ಈ ಕುರಿತಂತೆ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಮೃತರ ಪತ್ನಿ ದಾಖಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ನಂತರವಷ್ಟೆ ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

Shivamogga, September 12: An incident occurred in Hiriyogi village of Hosanagar taluk, Shivamogga district, resulting in the death of a person due to an accidental discharge from a firearm.

Soraba: 38 sheeps die suddenly! ಸೊರಬ : 38 ಕುರಿಗಳ ದಿಡೀರ್ ಸಾವು! Previous post soraba | ಸೊರಬ : 38 ಕುರಿಗಳ ದಿಡೀರ್ ಸಾವು!
Disruption in drinking water supply in Shivamogga city on December 11th - 12th! ಶಿವಮೊಗ್ಗ ನಗರದಲ್ಲಿ ಡಿಸೆಂಬರ್ 11 - 12 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ Next post shimoga | ಶಿವಮೊಗ್ಗ ನಗರದಲ್ಲಿ  ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಯಾವಾಗ?