shimoga | Shivamogga: Drinking water is a problem - citizens are outraged! ಶಿವಮೊಗ್ಗ : ಕುಡಿಯುವ ನೀರಿಗೆ ಹಾಹಾಕಾರ – ನಾಗರೀಕರ ಆಕ್ರೋಶ

shimoga | ಶಿವಮೊಗ್ಗ : ಕುಡಿಯುವ ನೀರಿಗೆ ಹಾಹಾಕಾರ – ನಾಗರೀಕರ ಆಕ್ರೋಶ!

ಶಿವಮೊಗ್ಗ (shivamogga), ಡಿ. 28: ಶಿವಮೊಗ್ಗ ಮಹಾನಗರ ಪಾಲಿಕೆ 6 ನೇ ವಾರ್ಡ್ ವ್ಯಾಪ್ತಿಯ ಗಾಡಿಕೊಪ್ಪದ ಮೈಸೂರು ಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಕಳೆದ ಹಲವು ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ತೀವ್ರ ಸ್ವರೂಪದ ಹಾಹಾಕಾರ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

‘ನಮ್ಮ ಏರಿಯಾಕ್ಕೆ 24*7 ಪೈಪ್ ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ಈ ಮೊದಲು ಕುಡಿಯುವ ನೀರಿನ ಯಾವುದೇ ತೊಂದರೆ ಇರಲಿಲ್ಲ. ಆದರೆ ಕಳೆದ ಸರಿಸುಮಾರು 10 ದಿನಗಳಿಂದ, ದಿಢೀರ್ ಆಗಿ ನಮ್ಮ ಏರಿಯಾಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

ಸ್ಪಷ್ಟ ಕಾರಣ ಗೊತ್ತಾಗುತ್ತಿಲ್ಲ. ನೀರಿಗಾಗಿ ಪ್ರತಿನಿತ್ಯ ಅಲೆದಾಡುವಂತಾಗಿದೆ. ಹಣ ಕೊಟ್ಟು ನೀರು ಖರೀದಿಸಿ ತರುವಂತಾಗಿದೆ’ ಎಂದು ಗಾಡಿಕೊಪ್ಪದ ಮೈಸೂರು ಕೇರಿ ಮಹಿಳೆಯರು ದೂರುತ್ತಾರೆ.

‘ಕೆಲವೊಮ್ಮೆ ನೀರು ಬಂದರೂ ಕೆಲ ನಿಮಿಷಗಳ ಕಾಲ ಮಾತ್ರ ಬರುತ್ತದೆ. ಒಂದೆರೆಡು ಕೊಡಪಾನ ಭರ್ತಿ ಮಾಡುವಷ್ಟರಲ್ಲಿ ನೀರು ಸ್ಥಗಿತವಾಗುತ್ತದೆ. ಅಸಮರ್ಪಕ ಕುಡಿಯುವ ನೀರು ಪೂರೈಕೆಗೆ, ಕಾರಣವೇನು ಎಂಬ ಸ್ಪಷ್ಟ ಮಾಹಿತಿ ಗೊತ್ತಾಗುತ್ತಿಲ್ಲ.

ಪೈಪ್ ಒಡೆದು ಹೋಗಿದೆ ಎಂದು ಕೆಲವರು ಹೇಳುತ್ತಾರೆ. ಒಡೆದ ಪೈಪ್ ದುರಸ್ತಿಗೆ ಎರಡ್ಮೂರು ವಾರ ಬೇಕಾಗುತ್ತದೆಯೇ?’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಬೇಸಿಗೆ ಕಾಲ ಇನ್ನೂ ಆರಂಭವಾಗಿಲ್ಲ. ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹವಿದೆ. ಇಷ್ಟೆಲ್ಲದರ ಹೊರತಾಗಿಯೂ ನಾಗರೀಕರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪಾಲಿಕೆ, ಜಲ ಮಂಡಳಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ.

ಇದಕ್ಕೆ ಅವಕಾಶ ನೀಡದೆ, ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದವರು ಗಮನಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Shivamogga, december 28: In the areas around Mysuru Keri in Gadikoppa under Shimoga Mahanagara Corporation 5th Ward, there is no adequate supply of drinking water for the past several days. Local residents have complained that they have faced a severe disaster.

Water is being supplied to our area through pipes 24*7. Earlier there was no problem with drinking water. But from the last 10 days or so, suddenly our area is not getting adequate drinking water supply. No clear reason is known. There is daily wandering for water. It is like buying water by paying money,’ complain the Mysore Keri women of Gadikoppa.

tamil nadu | Annamalai who publicly protested against the government who was punished by whipping! tamilnadu | ಸಾರ್ವಜನಿಕವಾಗಿ ಚಾಟಿಯಿಂದ ದಂಡಿಸಿಕೊಂಡ ಸರ್ಕಾರದ ವಿರುದ್ದ ಪ್ರತಿಭಟಿಸಿದ ಅಣ್ಣಾಮಲೈ! Previous post tamilnadu | ಸಾರ್ವಜನಿಕವಾಗಿ ಚಾಟಿಯಿಂದ ದಂಡಿಸಿಕೊಂಡು ಸರ್ಕಾರದ ವಿರುದ್ದ ಪ್ರತಿಭಟಿಸಿದ ಅಣ್ಣಾಮಲೈ!
House burglary in Shikaripura – Soraba: Thieves carrying coins worth lakhs of rupees! ಶಿಕಾರಿಪುರ – ಸೊರಬದಲ್ಲಿ ಮನೆಗಳ್ಳತನ : ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ಹೊತ್ತೊಯ್ದ ಕಳ್ಳರು! Next post ಶಿಕಾರಿಪುರ – ಸೊರಬದಲ್ಲಿ ಮನೆಗಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಹೊತ್ತೊಯ್ದ ಕಳ್ಳರು!