
crime news | ತೀರ್ಥಹಳ್ಳಿ – ಹೊನ್ನಾಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ : ಸಿಕ್ಕಿಬಿದ್ದ ಮೂವರು ಆರೋಪಿಗಳು!
ಶಿವಮೊಗ್ಗ (shivamogga), ಮಾ. 16: ಇತ್ತೀಚೆಗೆ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆ ಸಮೀಪ ನಡೆದಿದ್ದ, 29 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ತೀರ್ಥಹಳ್ಳಿ ಹಾಗೂ ಹೊನ್ನಾಳ್ಳಿ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೇವಲ 6 ಗಂಟೆಗಳಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳ್ಳಿಯ ನೂರಾನಿ ಮಸೀದಿ ಸಮೀಪದ ನಿವಾಸಿ ಸೈಯದ್ ಅಬ್ದುಲ್ಲಾ (45), ನವೀದ್ ಅಹಮದ್ (40) ಹಾಗೂ ಜಾವೀದ್ (42) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ಪಿಎಸ್ಐ ಶಿವನಗೌಡ, ಸಿಬ್ಬಂದಿಗಳಾದ ಎಎಸ್ಐ ಲೋಕೇಶಪ್ಪ, ಸಿಬ್ಬಂದಿಗಳಾದ ಲಿಂಗೇಗೌಡ, ರಾಜಶೇಖರ್ ಶೆಟ್ಟಿಗಾರ್, ರವಿ,
ಪ್ರದೀಪ್, ಸುರೇಶ್ ನಾಯ್ಕ್, ಪ್ರಮೋದ್, ದೀಪಕ್, ಮಂಜುನಾಥ್, ರಾಘವೇಂದ್ರ, ಕರ್ಣೇಶ್, ಚಾಲಕರಾದ ಅವಿನಾಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಎಎನ್’ಸಿ ವಿಭಾಗದ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್, ವಿಜಯಕುಮಾರ್
ಹಾಗೂ ಹೊನ್ನಾಳ್ಳಿ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಸುನೀಲ್ ಕುಮಾರ್, ಎಎಸ್ಐ ಹರೀಶ್ ಸಿಬ್ಬಂದಿಗಳಾದ ಜಗದೀಶ್, ಹೇಮಾನಾಯ್ಕ್, ಸುರೇಶ್ ನಾಯ್ಕ್, ಮತ್ತು ರಾಜಶೇಖರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾರ್ಚ್ 16 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : 14/3/2025 ರಂದು ಹೊನ್ನಾಳ್ಳಿಯ ಬೊಂಬು ಬಜಾರ್ ನಿವಾಸಿ ಮಹಮ್ಮದ್ ಇರ್ಷಾದ್ ಎಂಬುವರು ತಮ್ಮ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ 29 ಲಕ್ಷ ರೂ.ಗಳೊಂದಿಗೆ, ಸ್ಕ್ರಾಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಚಾಲಕನೊಂದಿಗೆ ಹೊನ್ನಾಳ್ಳಿಯಿಂದ ಮಂಗಳೂರಿಗೆ ಹೊರಟಿದ್ದರು.
ಮಾರ್ಗ ಮಧ್ಯೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಸಮೀಪ ಹಣವಿದ್ದ ಬ್ಯಾಗ್ ನ್ನು ವಾಹನದಲ್ಲಿಯೇ ಇಟ್ಟು ಮಸೀದಿಗೆ ನಮಾಜ್ ಮಾಡಲು ತೆರಳಿದ್ದರು. ವಾಪಾಸ್ ಆಗಮಿಸಿದ ವೇಳೆ ದುಷ್ಕರ್ಮಿಗಳು, ಹಣವಿದ್ದ ಬ್ಯಾಗ್ ಸಮೇತ ವಾಹನ ಅಪಹರಿಸಿ ಪರಾರಿಯಾಗಿದ್ದರು.
Shivamogga, March 16: The police have succeeded in arresting three accused in connection with the recent theft of Rs 29 lakh near Ranjadakatte in Thirthahalli taluk. The police from Thirthahalli and Honnalli police stations conducted a joint operation and succeeded in identifying the accused within just 6 hours of the incident.