shimoga | ಶಿವಮೊಗ್ಗ : ಬಾಕಿ ಪಾವತಿಗೆ ಡೆಡ್‌ಲೈನ್ – ಇಲ್ಲದಿದ್ದರೆ ನೀರು ಪೂರೈಕೆ ಸ್ಥಗಿತ! shimoga | Shivamogga: Deadline for payment of dues – otherwise water supply will be cut off!

shimoga | ಶಿವಮೊಗ್ಗ : ಬಾಕಿ ಪಾವತಿಗೆ ಡೆಡ್‌ಲೈನ್ – ಇಲ್ಲದಿದ್ದರೆ ನೀರು ಪೂರೈಕೆ ಸ್ಥಗಿತ!

ಶಿವಮೊಗ್ಗ (shivamogga), ಮೇ 05: ಶಿವಮೊಗ್ಗ ನಗರದಲ್ಲಿ ಕಳೆದ 1 ವರ್ಷಕ್ಕಿಂತ ಮೇಲ್ಪಟ್ಟು ನೀರಿನ ಕಂದಾಯ ಪಾವತಿಸದೆ ಬಾಕಿ ಉಳಿಸಿಕೊಂಡವರು, ಮುಂದಿನ 7 ದಿನದೊಳಗೆ ಪಾವತಿಸಬೇಕು. ಇಲ್ಲದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಮೇ 5 ರಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಮಿಥುನ್ ಕುಮಾರ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನೀರಿನ ಕಂದಾಯದ ಬಾಕಿ ಮೊತ್ತ ಪಾವತಿಸುವಂತೆ ಮನವಿ ಮಾಡಿದ್ದಾರೆ.

ಡೆಡ್ ಲೈನ್! : ಕರ್ನಾಟಕ ನಗರ ನೀರು ಸರಬರಾಜು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು / ಮಾಲಿಕರು 1 ವರ್ಷಕ್ಕಿಂತ ಮೇಲ್ಪಟ್ಟು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ 7 ದಿನಗಳೊಳಗೆ ಕಡ್ಡಾಯವಾಗಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ತಪ್ಪಿದ್ದಲ್ಲಿ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು. ಈ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ ಬಾಕಿಯಿರುವ ನೀರಿನ ಕಂದಾಯ ಪಾವತಿಸುವಂತೆ ಪ್ರಕಟಣೆಯಲ್ಲಿ ನಾಗರೀಕರಿಗೆ ಮನವಿ ಮಾಡಿದ್ದಾರೆ.

Shivamogga, May 05: Those who have not paid their water revenue dues in Shivamogga city for more than a year and have outstanding arrears must pay within the next 7 days. Otherwise, the Karnataka Urban Water Supply and Sewerage Board has warned that their water connections will be disconnected.

In this regard, Mithun Kumar, Assistant Executive Engineer (AEE) of the board, issued a notification on May 5. He appealed to pay the arrears of water revenue.

Power outages in various parts of Shivamogga city on December 26th! ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ! Previous post shimoga | ಶಿವಮೊಗ್ಗ : ಮೇ 7 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!
shimoga APMC vegetable prices | Details of vegetable prices for December 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 6 ರ ತರಕಾರಿ ಬೆಲೆಗಳ ವಿವರ