Bhadravati | Bolero vehicle overturns: 14 people injured! ಭದ್ರಾವತಿ | ಬೊಲೆರೋ ವಾಹನ ಪಲ್ಟಿ : 14 ಜನರಿಗೆ ಗಾಯ!

hosanagara | ripponpet | ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾ**ವು!

ರಿಪ್ಪನ್’ಪೇಟೆ (ಹೊಸನಗರ), ಜು. 8: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕೊಂದರ ಸವಾರ ಮೃತಪಟ್ಟು, ಮತ್ತೊಂದು ಬೈಕ್ ಸವಾರ ಗಾಯಗೊಂಡ ಘಟನೆ ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯ ಶಿವಮಂದಿರ ಸಮೀಪ ಜು. 8 ರ ಸಂಜೆ ನಡೆದಿದೆ.

ಅರಸಾಳು ಗ್ರಾಮದ ಮಂಜಯ್ಯ ಟಿ (59) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಕೋಟೆತಾರಿಗ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಶಾಲೆಯಲ್ಲಿ ಕೆಲಸ ಮುಗಿಸಿಕೊಂಡು ಮಂಜಯ್ಯ ಟಿ ಅವರು ತಮ್ಮ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಎದುರಿನಿಂದ ಆಗಮಿಸಿದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜಯ್ಯರನ್ನು ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಪರೀಕ್ಷಿಸಿದ ವೈದ್ಯರು ಮಂಜಯ್ಯರವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ರಾಜುರೆಡ್ಡಿ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ripponpet (Hosanagar), Jul. 8: A head-on collision between two bikes left one biker dead and another injured near Shiva Mandir on Shivamogga Road in Rippan’pet town of Hosanagar taluk on the evening of July 8.

Man stabbed in Malavagoppa, Shivamogga city – Accused flees! ಶಿವಮೊಗ್ಗ ನಗರದ ಮಲವಗೊಪ್ಪದಲ್ಲಿ ವ್ಯಕ್ತಿಗೆ ಚೂರಿ ಇರಿತ – ಆರೋಪಿ ಪರಾರಿ Previous post shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
shimoga APMC vegetable prices | Details of vegetable prices for December 29 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 29 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 9 ರ ತರಕಾರಿ ಬೆಲೆಗಳ ವಿವರ