shimoga crime news | ಶಿವಮೊಗ್ಗ : ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ಮಂಗಳೂರು ವ್ಯಕ್ತಿಗೆ 2 ಲಕ್ಷ ರೂ. ವಂಚನೆ!
ಶಿವಮೊಗ್ಗ (shivamogga), ಆಗಸ್ಟ್ 7: ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿದ ವಂಚಕರ ತಂಡವೊಂದು, ಮಂಗಳೂರಿನ ವ್ಯಕ್ತಿಯೋರ್ವರಿಗೆ 2 ಲಕ್ಷ ರೂ. ಮೋಸ ಮಾಡಿದ ಘಟನೆ ಸಂಬಂಧ, ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೂಡಯ್ಯ ಆಚಾರ್ಯ (67) ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಮೊಬೈಲ್ ಫೋನ್ ಗೆ ಅನಾಮಧೇಯ ವಂಚಕ ವ್ಯಕ್ತಿಯೋರ್ವರು ಕರೆ ಮಾಡಿ, ನೆಲ ಅಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದ.
ಇದನ್ನು ನಂಬಿದ ಚೂಡಯ್ಯ ಆಚಾರ್ಯ ಅವರು, ವಂಚಕರ ಸೂಚನೆಯಂತೆ ಶಿವಮೊಗ್ಗದ ಹೊರವಲಯ ಈಶ್ವರ ವನದ ಬಳಿ 30-07-2025 ರಂದು ಬೆಳಿಗ್ಗೆ 06.30 ಗಂಟೆಗೆ ಆಗಮಿಸಿದ್ದಾರೆ. ಈ ವೇಳೆ ವಂಚಕನು ಮಹಿಳೆಯೋರ್ವರೊಂದಿಗೆ ಆಗಮಿಸಿದ್ದ.
ಚೀಲವೊಂದರಲ್ಲಿ ನಾಣ್ಯ ಕೊಟ್ಟು 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ಈ ವೇಳೆ ಬೈಕ್ ನಲ್ಲಿ ಆಗಮಿಸಿದ ವಂಚಕರ ಕಡೆಯವರು, ಬ್ಯಾಗ್ ಚೆಕ್ ಮಾಡಬೇಕೆಂದು ಬೆದರಿಸಿದ್ದಾರೆ. ತದನಂತರ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ಧಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
Shimoga, August 7: A group of fraudsters, who believed that they were giving gold coins, extorted Rs 2 lakh from each person. A case has been registered at the Vinobanagar Police Station in Shimoga regarding the incident of cheating.
More Stories
shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ!
Power outages in various parts of Shivamogga city on December 26th!
ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ!
shimoga news | ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಅಬ್ಬಲಗೆರೆಗೆ ‘ಭಾರ’ವಾದ ಬಡಾವಣೆಗಳು : ಗಮನಹರಿಸುವುದೆ ರಾಜ್ಯ ಸರ್ಕಾರ ?!
The layouts that have become a ‘burden’ for Abbalagere, the largest Gram Panchayat in Shivamogga district : Is the state government paying attention?!
ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಅಬ್ಬಲಗೆರೆಗೆ ‘ಭಾರ’ವಾದ ಬಡಾವಣೆಗಳು : ಗಮನಹರಿಸುವುದೆ ರಾಜ್ಯ ಸರ್ಕಾರ ?!
shimoga news | ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ – ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ಪ್ರೀ ಪೇಯ್ಡ್ ಕೌಂಟರ್ : DC ಮಾಹಿತಿ
Auto rickshaw prepaid counters at KSRTC and private bus stands in Shivamogga city: DC information
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ – ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್ : ಡಿಸಿ ಮಾಹಿತಿ
shimoga news | ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿದೆ ಬೋರ್ವೆಲ್ ಗಳ ಕೊರೆತ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?!
The number of borewells being drilled in Shivamogga city is increasing: Is the administration turning a blind eye?! *Is the focus shifting towards strengthening public drinking water supply?
ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿದೆ ಬೋರ್ವೆಲ್ ಗಳ ಕೊರೆತ : ಕಣ್ಮುಚ್ಚಿ ಕುಳಿತ್ತಿದೆಯೇ ಆಡಳಿತ?! *ಸಾರ್ವಜನಿಕ ಕುಡಿಯುವ ನೀರು ಪೂರೈಕೆಯ ಬಲವರ್ಧನೆಯತ್ತ ಹರಿಯುವುದೆ ಚಿತ್ತ?
shimoga news | ಶಿವಮೊಗ್ಗ : ಸಮಾರಂಭಕ್ಕೆ ಹೋದ ತಾಯಿ – ಮಗಳು ನಾಪತ್ತೆ!
Shivamogga: Mother and daughter who went to a ceremony go missing!
ಶಿವಮೊಗ್ಗ : ಸಮಾರಂಭಕ್ಕೆ ಹೋದ ತಾಯಿ – ಮಗಳು ನಾಪತ್ತೆ!
shimog news | ಶಿವಮೊಗ್ಗ : ಮೊಬೈಲ್ ಶಾಪ್ ನಲ್ಲಿ ವ್ಯಕ್ತಿಗೆ ಚೂರಿ ಇರಿತ ಪ್ರಕರಣ – ಮೂವರ ಬಂಧನ!
Shivamogga: Man stabbed in mobile shop – Three arrested!
ಶಿವಮೊಗ್ಗ : ಮೊಬೈಲ್ ಶಾಪ್ ನಲ್ಲಿ ವ್ಯಕ್ತಿಗೆ ಚೂರಿ ಇರಿತ ಪ್ರಕರಣ – ಮೂವರ ಬಂಧನ!
