kargal | ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ!

Police parade in Kargal town! ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ

ಸಾಗರ (sagara), ಆಗಸ್ಟ್ 19: ಮುಂಬರುವ ಗೌರಿ ಗಣೇಶ್ ಹಬ್ಬ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 19 ರಂದು ಜಿಲ್ಲಾ ಪೊಲೀಸರು ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.

ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎ ಎಫ್), ವಿಶೇಷ ಕಾರ್ಯಪಡೆ ಪೊಲೀಸರು ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

ಕಾರ್ಗಲ್ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪಥ ಸಂಚಲನ ಸಾಗಿತು. ಪೊಲೀಸರ ಪಥ ಸಂಚಲನವು ನಾಗರೀಕರ ಗಮನ ಸೆಳೆಯಿತು.

ಮುನ್ನೆಚ್ಚರಿಕೆ : ಕಳೆದ ಹಲವು ದಿನಗಳಿಂದ ಜಿಲ್ಲೆಯ ನಗರ – ಪಟ್ಟಣ ಪ್ರದೇಶಗಳಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಸ್ಥಳೀಯ ಠಾಣೆಗಳ ಪೊಲೀಸರೊಂದಿಗೆ ಪಥ ಸಂಚಲನ ನಡೆಸುತ್ತಿದ್ದಾರೆ. ಇದೀಗ ಆರ್ ಎ ಎಫ್  ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದಾರೆ.

Sagara, August 19: As a precautionary measure, the district police conducted a procession in Kargal town of Sagara taluk on August 19, in view of the upcoming Gauri Ganesh festival and to maintain law and order.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →