shimoga news | ನಿಗಮ – ಮಂಡಳಿಗಳ ಅಧ್ಯಕ್ಷರ ನೇಮಕ : ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಚೇತನ್ ಕೆ ಗೌಡಗೆ ಒಲಿದ ಅದೃಷ್ಟ!
ಶಿವಮೊಗ್ಗ (shivamogga), ಸೆಪ್ಟೆಂಬರ್ 24: ನೆನೆಗುದಿಗೆ ಬಿದ್ದಿದ್ದ ನಿಗಮ – ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದೆ. 39 ನಿಗಮ – ಮಂಡಳಿಗಳಿಗೆ ಅಧ್ಯಕ್ಷರ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಚೇತನ್ ಕೆ ಗೌಡ ( chetan k gowda ) ಗೆ ಅವಕಾಶ ಕಲ್ಪಿಸಲಾಗಿದೆ.
ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ, ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಲವು ಪ್ರಭಾವಿ ಮುಖಂಡರು ಕಣ್ಣಿಟ್ಟಿದ್ದರು. ಸಾಕಷ್ಟು ಕಸರತ್ತು ನಡೆಸಿದ್ದರು. ಕೆಲವರು ಹೈಕಮಾಂಡ್ ಹಂತದಲ್ಲಿಯೂ ಭಾರೀ ಲಾಬಿ ಮಾಡಿದ್ದರು.
ಆದರೆ ಕಾಂಗ್ರೆಸ್ ಹೈಕಮಾಂಡ್, ಶಿವಮೊಗ್ಗ ಜಿಲ್ಲೆಯ ಯುವ ಮುಖಂಡ ಚೇತನ್ ಕೆ ಗೌಡಗೆ ಅವಕಾಶ ಕಲ್ಪಿಸಿದೆ. ‘ಕರ್ನಾಟಕ ಸ್ಟೇಟ್ ಹ್ಯಾಂಡ್ ಲೂಮ್ಸ್ ಇನ್ಫ್ರಾಸ್ಟ್ರಕ್ಚರ್ (ಪವರ್ ಲೂಮ್ಸ್) ಬೋರ್ಡ್’ ನ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದೆ.
ಹಿನ್ನೆಲೆ : NSUI ಸಂಘಟನೆ ಮೂಲಕ ಚೇತನ್ ಕೆ ಗೌಡರವರು ಹೋರಾಟ ಆರಂಭಿಸಿದ್ದರು. 2005 ರಲ್ಲಿ ನ್ಯಾಷನಲ್ ಪಿಯು ಕಾಲೇಜ್ ನಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ, ಅಂದಿನ NSUI ಜಿಲ್ಲಾಧ್ಯಕ್ಷರಾಗಿದ್ದ ಮಧುಸೂದನ್ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಂದ ಸತತ ನಾಲ್ಕು ವರ್ಷಗಳ ಕಾಲ, ಶಿವಮೊಗ್ಗ ಜಿಲ್ಲೆಯಲ್ಲಿ NSUI ಸಂಘಟನೆಯನ್ನು ಪ್ರಬಲ ವಿದ್ಯಾರ್ಥಿ ಪರ ಸಂಘಟನೆಯನ್ನಾಗಿ ರೂಪಿಸುವಲ್ಲಿ ಸಕ್ರಿಯವಾಗಿ ದುಡಿದಿದ್ದರು.
ಇವರ ಸೇವೆಗೆ ಪ್ರತಿಫಲವಾಗಿ 2009 ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆನಂತರ ಎರಡು ವರ್ಷ ನಗರಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ದೆಹಲಿಯಲ್ಲಿ ನಡೆದ NSUI ಪದಾಧಿಕಾರಿಗಳ ತರಬೇತಿ ಶಿಬಿರದಲ್ಲಿ, ಅತ್ಯುತ್ತಮ ಜಿಲ್ಲಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಸ್ವತಃ ಎಐಸಿಸಿ ವರಿಷ್ಟ ರಾಹುಲ್ ಗಾಂಧಿಯವರು ಚೇತನ್ ರಿಗೆ ಅತ್ಯುತ್ತಮ ಜಿಲ್ಲಾಧ್ಯಕ್ಷ ಗೌರವ ನೀಡಿ, ಚೇತನ್ ರ ಸೇವೆಯನ್ನ ಮೆಚ್ಚಿ ಸ್ಮರಿಸಿದ್ದರು.
‘ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ’ : ಕಾಂಗ್ರೆಸ್ ಮುಖಂಡ ಸಿ ಜೆ ಮಧುಸೂದನ್ ಸಂತಸ
*** ‘ಯುವ ನಾಯಕ ಚೇತನ್ ಕೆ ಗೌಡ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದರ ಜೊತೆಗೆ, ಸಾರ್ವಜನಿಕ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಚೇತನ್ ಕೆ ಗೌಡರಂತಹ ನಿಷ್ಠಾವಂತ ಕಾರ್ಯಕರ್ತನನ್ನು ಗುರುತಿಸಿ, ಕರ್ನಾಟಕ ಸ್ಟೇಟ್ ಹ್ಯಾಂಡ್ ಲೂಮ್ಸ್ ಇನ್ಫ್ರಾಸ್ಟ್ರಕ್ಚರ್ (ಪವರ್ ಲೂಮ್ಸ್) ಬೋರ್ಡ್ ಅಧ್ಯಕ್ಷ ಸ್ಥಾನ ಕಲ್ಪಿಸಿರುವ ಪಕ್ಷದ ವರಿಷ್ಠರ ಕ್ರಮ ಅಭಿನಂದನಾರ್ಹವಾದುದಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲ ನಾಯಕರಿಗೂ ಧನ್ಯವಾದ ಅರ್ಪಿಸುವುದಾಗಿ’ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಸಿ ಜೆ ಮಧುಸೂದನ್ (madhusudhan) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Shivamogga, September 24: The Congress high command has finally taken action on the pending appointment of chairmen of the corporation boards. Orders have been issued appointing chairmen to 39 corporation boards. In this, Shivamogga Youth Congress leader Chethan K Gowda has been given a chance.
