shimoga – shikaripura accident news | ಶಿವಮೊಗ್ಗ – ಶಿಕಾರಿಪುರದಲ್ಲಿ ಅಪಘಾತ : ನಾಲ್ವರು ಸಾವು – ಇಬ್ವರಿಗೆ ಗಾಯ!
ಶಿವಮೊಗ್ಗ (shivamogga), ಅಕ್ಟೋಬರ್ 30: ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ, ನಾಲ್ವರು ಮೃತಪಟ್ಟು ಓರ್ವ ಗಾಯಗೊಂಡ ಘಟನೆ ನಡೆದಿದೆ.
ಶಿವಮೊಗ್ಗ ವರದಿ : ಶಿವಮೊಗ್ಗ ನಗರದ ಹೊರವಲಯ ಗೋಂಧಿ ಚಟ್ನಹಳ್ಳಿ ಬಳಿ ಅಕ್ಟೋಬರ್ 30 ರ ಮುಂಜಾನೆ ಗೂಡ್ಸ್ ವಾಹನವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಅಸಾದುಲ್ಲಾ (50), ಸಾದಿಕ್ ( 30) ಮತ್ತು ಫಿರೋಜ್ ( 22) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಸಾದುಲ್ಲಾ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನವರಾಗಿದ್ದಾರೆ. ಸಾದಿಕ್ ಮತ್ತು ಫಿರೋಜ್ ಉತ್ತರ ಪ್ರದೇಶ ರಾಜ್ಯದವರೆಂದು ಹೇಳಲಾಗಿದೆ.
ವಾಹನದಲಿದ್ದ ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ.
ಶಿಕಾರಿಪುರ ವರದಿ : ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ಗ್ರಾಮದ ಬಳಿ ಬೈಕ್ ವೊಂದಕ್ಕೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ರಾಗಿಕೊಪ್ಪ ತಾಂಡಾದ ನಿವಾಸಿ ಪುನೀತ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ರಾಜೀವ್ (24) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ನೀಡಿದ್ದರು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Accident in Shivamogga – Shikaripura: Four dead – two injured | shivamogga, October 30: Four people died and one was injured in two separate road accidents in Shivamogga and Shikaripura taluks.
