bhadravati news | ಭದ್ರಾವತಿಯಲ್ಲಿ ಅಸ್ಸಾಂ ರಾಜ್ಯದ ಮಹಿಳೆಯ ನಿಗೂಢ ಕಣ್ಮರೆ!
ಭದ್ರಾವತಿ (bhadravathi), ಡಿಸೆಂಬರ್ 23: ಆಲೆಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಅಮೀರ್ ಜಾನ್ ಕಾಲೋನಿಯಲ್ಲಿ ನಡೆದಿದೆ.
ಮೂಲತಃ ಅಸ್ಸಾಂ ರಾಜ್ಯದ ನಿವಾಸಿಯಾದ ಸಮೀರುನ್ನೀಸಾ ಕೋಂ ಅಹದ್ ಆಲಿ (28) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸಮೀರುನ್ನೀಸಾ ಅವರು ಹೈದರ್ ಆಲಿ ಎಂಬುವರ ಮನೆಯ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 16 ರಂದು ಹೊರಗಡೆ ಹೋದವರು ನಾಪತ್ತೆಯಾಗಿದ್ದಾರೆ.
ಚಹರೆ : ಮಹಿಳೆಯು 4.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಡ ಮೊಣಕೈ ಹತ್ತಿರ ಗೋಲಿ ಗಾತ್ರದ ಗಂಟು ಇದೆ. ಉರ್ದು, ಹಿಂದಿ, ಅಸ್ಸಾಂ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
The mysterious disappearance of a woman took place in Amir Jan Colony on Holehonnur Road under the jurisdiction of Halenagar Police Station in Bhadravati.
More Stories
bhadravati news | ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
Bhadravati: A love dispute that turned into a disaster – ended in the murder of two people!
ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
job news | ಉದ್ಯೋಗ ಮಾಹಿತಿ | ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
Job Information | Applications invited for the posts of Anganwadi workers and helpers in Shivamogga and Bhadravati taluks
ಉದ್ಯೋಗ ಮಾಹಿತಿ | ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
Woman’s body found in Bhadra River in Bhadravati city!
ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
bhadravati news | ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
Caste abuse, assault case : Bhadravati man sentenced to 4 years rigorous imprisonment!
ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
bhadravati | ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ : ನಾಗರೀಕರ ಆತಂಕ!
‘Chaddi gang’ roaming in Bhadravati: Citizens worried!
ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ ಓಡಾಟ : ನಾಗರೀಕರ ಆತಂಕ!
bhadravati | ಭದ್ರಾವತಿ : ಮನೆಯಲ್ಲಿ ಕಳ್ಳತನ – ಬೆಂಗಳೂರಿನ ಇಬ್ಬರು ಆರೋಪಿಗಳ ಬಂಧನ!
Theft at home in Bhadravati: Two accused from Bengaluru arrested!
ಭದ್ರಾವತಿಯಲ್ಲಿ ಮನೆಯಲ್ಲಿ ಕಳ್ಳತನ : ಬೆಂಗಳೂರಿನ ಇಬ್ಬರು ಆರೋಪಿಗಳ ಬಂಧನ!
