What is the discharge of Linganamakki, Tunga, Bhadra reservoirs? ಲಿಂಗನಮಕ್ಕಿ, ತುಂಗ, ಭದ್ರಾ ಜಲಾಶಯಗಳ ಹೊರಹರಿವು ಎಷ್ಟಿದೆ?

ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಹೊರಹರಿವು ಎಷ್ಟಿದೆ?

ಶಿವಮೊಗ್ಗ (shivamogga), ಆ. 2: ಮಲೆನಾಡಿನಲ್ಲಿ ಮುಂಗಾರು ಮಳೆ (malnad rain) ಮುಂದುವರಿದಿದೆ. ಈ ನಡುವೆ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿರುವುದರಿಂದ ನಿರಂತರವಾಗಿ ನೀರನ್ನು ಹೊರ ಹರಿಸಲಾಗುತ್ತಿದೆ.

ಆಗಸ್ಟ್ 2 ರ ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 51,961 ಕ್ಯೂಸೆಕ್ ಇದೆ. ಡ್ಯಾಂನಿಂದ 16,913  ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1815 (ಗರಿಷ್ಠ ಮಟ್ಟ : 1819) ಅಡಿಯಿದೆ.

ಭದ್ರಾ ಜಲಾಶಯದ (bhadra dam) ಒಳಹರಿವು 38,870 ಕ್ಯೂಸೆಕ್ ಇದೆ. ಆದರೆ ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದ್ದು (outflow), 56,636 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 182. 7 (ಗರಿಷ್ಠ ಮಟ್ಟ : 186) ಅಡಿಯಿದೆ.

ಉಳಿದಂತೆ ಕಳೆದ ತಿಂಗಳೇ ತುಂಗಾ ಡ್ಯಾಂ (tunga dam) ಗರಿಷ್ಠ ಮಟ್ಟ ತಲುಪಿತ್ತು. ಪ್ರಸ್ತುತ ಡ್ಯಾಂನ ಒಳಹರಿವು 41,900 ಕ್ಯೂಸೆಕ್ ಇದ್ದು, 41 ಸಾವಿರ ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (hospet tungabhadra dam) ಹೊರ ಹರಿಸಲಾಗುತ್ತಿದೆ.

ಜಲಾನಯನ ಪ್ರದೇಶಗಳ (catchment areas) ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣದಲ್ಲಿ (rainfall) ಕೊಂಚ ಇಳಿಕೆಯಾಗಿರುವುದರಿಂದ ಮೂರು ಜಲಾಶಯಗಳ (dams water level) ಒಳಹರಿವಿನಲ್ಲಿ ತುಸು ಇಳಿಕೆ ಕಂಡುಬಂದಿದೆ.

Linganamakki dam water has increased the weeds of Joga waterfall! ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು Previous post ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು!
Governor is working like puppet of central government : CM Siddaramaiah ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ Next post ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ