
sigandur bridge | ಸಿಗಂದೂರು ಸೇತುವೆ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಶಿವಮೊಗ್ಗ (shimoga), ಜು. 14: ದೇಶದಲ್ಲಿಯೇ 2 ನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಸೇತುವೆಯನ್ನು ಜು. 14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
ಮಧ್ಯಾಹ್ನ 12. 20 ರ ಸುಮಾರಿಗೆ ಸಿಗಂದೂರು ಸೇತುವೆ ಬಳಿ ಆಗಮಿಸಿದ ಸಚಿವರು, ಉದ್ಘಾಟನಾ ಕಲ್ಲುಗಳನ್ನು ಅನಾವರಣಗೊಳಿಸಿದರು. ಹೋಮ ವಿಧಿವಿಧಾನದಲ್ಲಿ ಭಾಗಿಯಾಗಿ ಆರತಿ ಬೆಳಗಿದರು. ನಂತರ ಶರಾವತಿ ನದಿಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಮೊದಲಾದವರಿದ್ದರು.
ತದನಂತರ ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ವೇದಿಕೆ ಸಮಾರಂಭ ನಡೆಯಿತು. ಸಿಗಂದೂರು ಸೇತುವೆ ಸೇರಿದಂತೆ ಭೂ ಸಾರಿಗೆ ಇಲಾಖೆಗೆ ಸಂಬಂಧಿಸಿದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನಿತಿನ್ ಗಡ್ಕರಿ ನೆರವೇರಿಸಿದರು.
ಗೈರು : ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲವೆಂದು ಆರೋಪಿಸಿ, ಕಾಂಗ್ರೆಸ್ ನಾಯಕರು ಸಮಾರಂಭದಿಂದ ದೂರ ಉಳಿದರು. ಸಮಾರಂಭದಲ್ಲಿ ಭಾಗಿಯಾಗಲೆಂದು ಜು. 13 ರಂದೇ ಆಗಮಿಸಿ ತಂಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಕೂಡ ಸಮಾರಂಭದಿಂದ ದೂರ ಉಳಿದರು.
ಜು. 13 ರಂದು ಸಮಾರಂಭ ಮುಂದೂಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ನಿತಿನ್ ಗಡ್ಕರಿ ಅವರು ಪೂರ್ವ ನಿಗದಿತ ವೇಳಾಪಟ್ಟಿಯಂತೆ ಸಮಾರಂಭದಲ್ಲಿ ಭಾಗಿಯಾದರು.
Shivamogga, Jul. 14: Union Land Transport Minister Nitin Gadkari inaugurated the Sigandur Bridge in Sagar taluk of Shivamogga district, which is considered to be the 2nd longest cable-stayed bridge in the country, on Jul. 14.