ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ : ಅಖಾಡದಲ್ಲಿ 74 ಅಭ್ಯರ್ಥಿಗಳು

ಶಿವಮೊಗ್ಗ, ಏ. 24: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿತ್ತು. ಒಟ್ಟಾರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 74 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಕ್ಷೇತ್ರವಾರು ವಿವರ ಈ ಮುಂದಿನಂತಿದೆ.

ಶಿವಮೊಗ್ಗ, ಏ. 24: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ, ನಾಮಪತ್ರ ಪತ್ರ ಹಿಂಪಡೆಯುವ ಕಾರ್ಯಕ್ಕೆ ಎ. 24 ರಂದು ತೆರೆ ಬಿದ್ದಿದೆ. ಒಟ್ಟಾರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ, 74 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಕ್ಷೇತ್ರವಾರು ವಿವರ ಈ ಮುಂದಿನಂತಿದೆ.

      ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್  ಕಣದಲ್ಲಿ ಉಳಿದಿದ್ದಾರೆ.

     ಭದ್ರಾವತಿ ಕ್ಷೇತ್ರ

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.

     ಶಿವಮೊಗ್ಗಕ್ಷೇತ್ರ

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಯ ಎಸ್.ಎನ್.ಚನ್ನಬಸಪ್ಪ, ಐಎನ್‍ಸಿ ಹೆಚ್.ಸಿ.ಯೋಗೇಶ್, ಎಎಪಿ ನೇತ್ರಾವತಿ.ಟಿ, ಜೆಡಿಎಸ್  ಆಯನೂರ್ ಮಂಜುನಾಥ, ಉತ್ತಮ ಪ್ರಜಾಕೀಯ ಪಾರ್ಟಿ ಯ ವೆಂಕಟೇಶ್ ಆರ್, ಕೆಆರ್‍ಎಸ್ ನ ರಾಜೇಂದ್ರ  ಡಿ, ಪಕ್ಷೇತರ ರಿಯಾಜ್ ಅಹಮದ್, ಮೊಹಮ್ಮದ್ ಯೂಸುಫ್ ಖಾನ್, ಅಜಯ್‍ಕುಮಾರ್ ಬಿ.ಎಸ್, ಅಕ್ಕಮಹಾದೇವಿ.ಹೆಚ್.ಎಂ, ಶೇಖರನಾಯ್ಕ್, ವಿ.ಹನುಮಶೆಟ್ಟಿ, ಅನಿಲ್.ಎಂಆರ್, ಹೆಚ್.ಎಸ್.ಗಣೇಶ್, ರವಿಕುಮಾರ್.ಎನ್ ಕಣದಲ್ಲಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್‍ಸಿ ಕಿಮ್ಮನೆ ರತ್ನಾಕರ, ಕೆಆರ್‍ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಹೆಗ್ಗಡೆ ಕಣದಲ್ಲಿದ್ದಾರೆ.

      ಶಿಕಾರಿಪುರ ಕ್ಷೇತ್ರ

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಪಿಐ ಪಕ್ಷದ ಯಲ್ಲಪ್ಪ, ಕೆಆರ್‍ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ ಇಮ್ತಿಯಾಜ್ ಅತ್ತರ್, ಜಿ.ಬಿ.ಮಾಲತೇಶ್, ಅನಿಲ್.ಎಂ.ಆರ್, ಮೊಹಮ್ಮದ್ ಸಾದಿಕ್, ನಾಗನಗೌಡ ಎಸ್.ಪಿ, ಗಣೇಶ ಆರ್. ಕಣದಲ್ಲಿದ್ದಾರೆ.

       ಸೊರಬ ಕ್ಷೇತ್ರ 

ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಬಿ.ಚಂದ್ರಪ್ಪಗೌಡ, ಸಮಾಜವಾದಿ ಪಾರ್ಟಿ ಪರಶುರಾಮ ವಿ.ಜಿ, ಎಎಪಿ ಚಂದ್ರಶೇಖರ ಕೆ ವೈ, ಉತ್ತಮ ಪ್ರಜಾಕೀಯ ಪಾರ್ಟಿ ಲಕ್ಷ್ಮೀಕಾಂತ ಸಿ.ಎಸ್, ಐಎನ್‍ಸಿ ಮಧು ಬಂಗಾರಪ್ಪ, ಬಿಜೆಪಿ ಎಸ್ ಕುಮಾರ್ ಬಂಗಾರಪ್ಪ, ಕೆಆರ್‍ಎಸ್ ಟಿ.ಮಂಜುನಾಥ, ಪಕ್ಷೇತರ ಶಿವಯೋಗಿ ಎಸ್ ಎಸ್, ಗುಡ್ಡಪ್ಪ, ಜೆ.ಎಸ್.ಚಿದಾನಂದ ಗೌಡ ಕಣದಲ್ಲಿದ್ದಾರೆ.

    ಸಾಗರ ಕ್ಷೇತ್ರ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಸೈಯದ್ ಜಾಕಿರ್, ಕೆಆರ್‍ಎಸ್ ಕಿರಣ್.ಬಿ.ಇ, ಬಿಜೆಪಿ ಹೆಚ್.ಹಾಲಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ ಸೋಮರಾಜ ಎನ್, ಐಎನ್‍ಸಿ ಗೋಪಾಲಕೃಷ್ಣ ಬೇಳೂರು, ಎಎಪಿ ಕೆ.ದಿವಾಕರ, ಪಕ್ಷೇತರ ಶಿವಕುಮಾರ ಕೆ.ವಿ, ಹರಟೆ ಗಾಮಪ್ಪ, ಟಿ.ಎನ್.ಶ್ರೀನಿವಾಸ ಕಣದಲ್ಲಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →