hosanagara news | ರಿಪ್ಪನ್’ಪೇಟೆ : ಬೈಕ್ ಅಪಘಾತ – ಓರ್ವ ಸಾವು, ಮತ್ತೋರ್ವನಿಗೆ ಗಾಯ!
ಹೊಸನಗರ (hosanagar), ಡಿಸೆಂಬರ್ 8: ಚಾಲನೆಯ ನಿಯಂತ್ರಣ ಕಳೆದುಕೊಂಡ ಬೈಕ್ ವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡ ಘಟನೆ, ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಸಮೀಪದ ಕೋಡ್ರಿಗೆ ಹೊಳೆ ಸಮೀಪ ನಡೆದಿದೆ.
ಹೆದ್ದಾರಿಪುರ ಬಳಿಯ ಗಿಣಸೆ ಗ್ರಾಮದ ನಿವಾಸಿ ಮಂಜುನಾಥ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ. ಲೋಹಿತ್ (29) ಎಂಬುವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಹರತಾಳು ಗ್ರಾಮದಿಂದ ಹೆದ್ದಾರಿಪುರಕ್ಕೆ ಇಬ್ಬರು ಆಗಮಿಸುತ್ತಿದ್ದ ವೇಳೆ, ಚಾಲನೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಮರಕ್ಕೆ ಬೈಕ್ ಡಿಕ್ಕಿಯಾಗಿದೆ.
ಘಟನೆಯಲ್ಲಿ ಮಂಜುನಾಥ್ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hosanagara, December 8: A motorcycle rider died and another was injured when he lost control of his bike and crashed into a tree on the side of the road. The incident took place near Kodri Hole near Rippanpet in Hosanagara taluk.
More Stories
hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
Private bus accident near Hulikal Ghat: Child dies, 10 passengers injured
ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
hosanagara | ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!
Hosanagara : Man killed by accidental discharge from a loaded gun!
ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!
hosanagara accident | ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!
Two separate road accidents: Driver dies, two injured!
ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!
yadur abbi falls | ನೋಡ ನೋಡುತ್ತಿದ್ದಂತೆ ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ!
shimoga | hosanagara | A young man from Bangalore who was crushed in Abby Falls! ನೋಡ ನೋಡುತ್ತಿದ್ದಂತೆ ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ!
hosanagara | ripponpet | ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾ**ವು!
Ripponpet : Head-on collision of bikes – teacher dead!
ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾವು!
hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!
Heavy rain: Holiday declared for schools and colleges in Hosanagar taluk!
ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!
