land slides in different parts of thirthahalli taluk! ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭೂ ಕುಸಿತ!

ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭೂ ಕುಸಿತ!

ತೀರ್ಥಹಳ್ಳಿ (thirthahalli), ಆ. 2: ಭಾರೀ ಮಳೆಯಿಂದ (heavy rainfall) ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಇತ್ತೀಚೆಗೆ ಭೂ ಕುಸಿತ (land slides) ಉಂಟಾಗಿರುವ ಘಟನೆಗಳು ವರದಿಯಾಗಿವೆ.

ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಕೂಡಿಗೆಯ ಬೆಕ್ಕನೂರು ಗ್ರಾಮದ ಮಂಜುನಾಥ್ ಎಂಬುವರ ಮನೆಯ ಪಕ್ಕದಲ್ಲಿಯೇ ಗುಡ್ಡವೊಂದು ಕುಸಿದಿದೆ. ಗುಡ್ಡದ ಮಣ್ಣು ಮನೆಯ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತಲು ಆವರಿಸಿದೆ.

ಮತ್ತೊಂದೆಡೆ, ಮೇಗರವಳ್ಳಿ ಸಮೀಪ ಉಡುಪಿ – ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ಧಾರಿ (national highway) ಬದಿಯಲ್ಲಿ ಭೂ ಕುಸಿತವಾಗಿದೆ (land slide). ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಸಂಬಂಧಿಸಿದ ಇಲಾಖೆಯುವರು ಕುಸಿತವಾದ  ಸ್ಥಳದಲ್ಲಿ ಕುಸಿತ ತಡೆ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಕ್ರಮಕೈಗೊಂಡಿದ್ಧಾರೆ ಎಂದು ಹೇಳಲಾಗಿದೆ.

ತಾಲೂಕಿನ ಸಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುನ್ನಿಕೇವಿ ಸೇತುವೆಯು ಮಳೆಯಿಂದ ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Governor is working like puppet of central government : CM Siddaramaiah ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ Previous post ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ
The accused who was involved in 23 house theft cases who was absconding without attending the court hearing was arrested! ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 23 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ! Next post ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 23 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ!