 
        			
		shimoga | ಶಿವಮೊಗ್ಗ : UPSC ಪರೀಕ್ಷೆ- ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದ ಸಾಗರದ ಸಾಧಕ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಏ. 22: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್’ಸಿ) ದ ಪರೀಕ್ಷೆ ಫಲಿತಾಂಶ ಏ. 22 ರಂದು ಪ್ರಕಟಗೊಂಡಿದ್ದು, ಸಾಗರ ಪಟ್ಟಣದ ಯುವಕನೋರ್ವ ಮೊದಲ ಪ್ರಯತ್ನದಲ್ಲಿಯೇ 288 ನೇ ರ‍್ಯಾಂಕ್ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ಹಾರಿಸಿದ್ದಾರೆ.
ಸಾಗರದ ಅಣಲೆಕೊಪ್ಪದ ನಿವಾಸಿ, ಪ್ರಸ್ತುತ ದೆಹಲಿಯ ಕೇಂದ್ರ ರಕ್ಷಣಾ ಇಲಾಖೆಯ ಡಿಆರ್’ಡಿಓ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 28 ರ ವಯೋಮಾನದ ವಿಕಾಸ್ ವಿ ಯುಪಿಎಸ್’ಸಿ ಪರೀಕ್ಷೆ ತೇರ್ಗಡೆಗೊಂಡ ಸಾಧಕರಾಗಿದ್ದಾರೆ.
ವಿಕಾಸ್ ವಿ ಅವರ ತಂದೆ ವಿ ಸಿ ಪಾಟೀಲ್ ಅವರು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಇತಿಹಾಸ ಉಪನ್ಯಾಸಕರಾಗಿದ್ದಾರೆ. ಹಾಗೆಯೇ ಅವರ ತಾಯಿ ಮಹಾಲಕ್ಷ್ಮೀ ಹೆಗಡೆ ಅವರು, ಅದೇ ಕಾಲೇಜ್ ನ ಹೈಸ್ಕೂಲ್ ವಿಭಾಗದಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಶ್ರಮ : ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್’ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪುತ್ರನ ಸಾಧನೆಗೆ ತಂದೆ ವಿ ಸಿ ಪಾಟೀಲ್ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆತನ ಸತತ ಸಾಧನೆ, ಪರಿಶ್ರಮವೇ ಯಶಸ್ಸಿಗೆ ಕಾರಣವೆಂದು ಹೇಳುತ್ತಾರೆ.
‘ಪುತ್ರ ವಿಕಾಸ್ ವಿ ಹೊಸನಗರದಲ್ಲಿ ಪ್ರಾಥಮಿಕ, ಸಾಗರದ ಎಂಜಿಎನ್ ಪೈ ಶಾಲೆಯಲ್ಲಿ ಹೈಸ್ಕೂಲ್, ಶಿವಮೊಗ್ಗದ ಪೇಸ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪಿಯುಸಿ ಹಾಗೂ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದ.
ಮೈಸೂರಿನ ನ್ಯಾಷನಲ್ ಇನ್ಸ್’ಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಯಲ್ಲಿ ಬಿಇ ಅಭ್ಯಾಸ ಮಾಡಿದ್ದ. ನಂತರ ಉತ್ತರಖಂಡದ ರೂರ್’ಕೆಯಲ್ಲಿ ಎಂಟೆಕ್ ಓದಿದ್ದು, ನಂತರ ಡಿಆರ್’ಡಿಓ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ’ ಎಂದು ತಂದೆ ವಿ ಸಿ ಪಾಟೀಲ್ ಅವರು ಮಾಹಿತಿ ನೀಡುತ್ತಾರೆ.
‘ಅತೀ ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದ. ಪ್ರಚಲಿತ ವಿದ್ಯಮಾನಗಳು, ಹೊಸ ವಿಷಯಗಳ ಕಲಿಕೆಗೆ ಅತೀವ ಆಸಕ್ತಿ ವಹಿಸುತ್ತಿದ್ದ. ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿರಲಿಲ್ಲ. ಯೋಜನಬದ್ದವಾಗಿ ಅಭ್ಯಾಸ ಮಾಡುತ್ತಿದ್ದ. ಇವೆಲ್ಲವೂ ಆತನ ಯಶಸ್ವಿಗೆ ಕಾರಣವಾಗಿದೆ’ ಎಂದು ಅಭಿಪ್ರಾಪಡುತ್ತಾರೆ.
‘ಯುಪಿಎಸ್’ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ನಿರೀಕ್ಷೆ ಮಗನಲ್ಲಿತ್ತು. ಆತನ ನಿರೀಕ್ಷೆ ನಿಜವಾಗಿದೆ. ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆ ತೇರ್ಗಡೆಯಾಗಿದ್ದಾನೆ. ಪುತ್ರನ ಸಾಧನೆ ಬಗ್ಗೆ ಹೆಮ್ಮೆಯಾಗುತ್ತದೆ. ಆತನಂತೆ ಶಿವಮೊಗ್ಗ ಜಿಲ್ಲೆಯ ಇತರೆ ಯುವಕ – ಯುವತಿಯರು ಸಾಧನೆ ಮಾಡಬೇಕು. ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂಬುವುದು ತಮ್ಮ ಅಭಿಪ್ರಾಯವಾಗಿದೆ’ ಎಂದು ಇದೇ ವೇಳೆ ವಿ ಸಿ ಪಾಟೀಲ್ ಅವರು ಹೇಳುತ್ತಾರೆ.
ಅಭಿನಂದನೆ : ‘ಮೊದಲ ಪ್ರಯತ್ನದಲ್ಲಿಯೇ ದೇಶದ ಪ್ರತಿಷ್ಠಿತ ಪರೀಕ್ಷೆಯಾದ ಯುಪಿಎಸ್’ಸಿ ಪರೀಕ್ಷೆಯಲ್ಲಿ ವಿಕಾಸ್ ವಿ ತೇರ್ಗಡೆಯಾಗಿರುವುದು ಅತೀವ ಸಂತಸ ಉಂಟು ಮಾಡಿದೆ. ಇತರೆ ಯುವ ಜನತೆಗೆ ಮಾದರಿಯಾಗಿದೆ. ಕಷ್ಟಪಟ್ಟು, ಸಾಧನೆಯ ಗುರಿಯಿಟ್ಟುಕೊಂಡು, ವ್ಯವಸ್ಥಿತವಾಗಿ ಅಭ್ಯಾಸ ನಡೆಸಿದರೆ ಯುಪಿಎಸ್’ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟವಲ್ಲ ಎಂಬುವುದನ್ನು ವಿಕಾಸ್ ವಿ ಅವರು ತೋರ್ಪಡಿಸಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಅಭಿನಂದನೆ ಸಲ್ಲಿಸುವುದಾಗಿ’ ಹೊಸನಗರ ತಾಲೂಕಿನ ಅಮೃತ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕ ಪ್ರಕಾಶ್ ಅವರು ತಿಳಿಸಿದ್ದಾರೆ.
Shivamogga, Apr. 22: The results of the Union Public Service Commission (UPSC) examination were declared on Apr. 22, and a young man from Sagar town has passed the examination by securing 288 th rank in his first attempt. By doing so, he has raised the banner of fame of the district to a higher level.
Vikas V, a 28-year-old resident of Analekoppa in Sagar, currently working at the DRDO, a central defense organization in Delhi, is a UPSC topper. Vikas V’s father, V C Patil, is a history lecturer at the Government Puc college Sagar. His mother, Mahalakshmi Hegde, is also a teacher in the high school department of the same college.

