A woman died of rabies as a result of being bitten by a cat! ಬೆಕ್ಕು ಕಚ್ಚಿದ ಪರಿಣಾಮ ರೇಬೀಸ್ ರೋಗಕ್ಕೆ ತುತ್ತಾಗಿ ಮಹಿಳೆ ಸಾವು!

ಬೆಕ್ಕು ಕಚ್ಚಿದ ಪರಿಣಾಮ ರೇಬೀಸ್ ರೋಗಕ್ಕೆ ತುತ್ತಾಗಿ ಮಹಿಳೆ ಸಾವು!

ಶಿಕಾರಿಪುರ (shikaripur), ಆ. 9: ಮನೆಯಲ್ಲಿ ಸಾಕಿದ್ದ ಬೆಕ್ಕೊಂದು ಕಚ್ಚಿದ (cat bite) ಪರಿಣಾಮ ರೇಬೀಸ್ ತಗುಲಿ ಮಹಿಳೆಯೋರ್ವರು (women) ಮೃತಪಟ್ಟ ಘಟನೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ (tarlagatta shikaripura) ಗ್ರಾಮದಲ್ಲಿ ನಡೆದಿದೆ.

ಗೃಹಿಣಿ ಗಂಗೀಬಾಯಿ (44) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಮಹಿಳೆಯ ಕಾಲಿಗೆ ಬೆಕ್ಕು (cat) ಕಚ್ಚಿತ್ತು. ಖಾಸಗಿ ಆಸ್ಪತ್ರೆಗೆ (private hospital) ತೆರಳಿ ಚಿಕಿತ್ಸೆ ಪಡೆದಿದ್ದರು.

ರೇಬೀಸ್ (rabies) ಮುನ್ನೆಚ್ಚರಿಕೆಯಾಗಿ ಐದು ಇಂಜೆಕ್ಷನ್ (rabies injection) ಪಡೆಯಬೇಕಿದ್ದ ಮಹಿಳೆಯು, ಕೇವಲ ಒಂದು ಇಂಜೆಕ್ಷನ್ ಪಡೆದಿದ್ದರು. ಗುಣಮುಖರಾಗಿದ್ದ ಕಾರಣದಿಂದ ಉಳಿದ ನಾಲ್ಕು ಇಂಜೆಕ್ಷನ್ (injection) ಪಡೆಯದೆ ನಿರ್ಲಕ್ಷ್ಯವಹಿಸಿದ್ದರು.

ಆದರೆ ಕಳೆದ 10 ದಿನಗಳ ಹಿಂದೆ ಅವರು ಅನಾರೋಗ್ಯಕ್ಕೆ (un health) ತುತ್ತಾಗಿದ್ದರು. ಗುಣಮುಖರಾಗದ ಕಾರಣದಿಂ ಶಿಕಾರಿಪುರ ತಾಲೂಕು ಆಸ್ಪತ್ರೆಗೆ (shikaripura govt hospital) ದಾಖಲಾಗಿದ್ದರು. ಅಲ್ಲಿಂದ ಅವರನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (shimoga megan hospital) ದಾಖಲಿಸಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಅಧಿಕಾರಿ ಡಾ. ಮಲ್ಲಪ್ಪ ಅವರು ತಿಳಿಸಿದ್ದಾರೆ.

ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಾಣಿಗಳು ಕಚ್ಚಿದ (animal bites) ವೇಳೆ ತಕ್ಷಣವೇ ಸದರಿ ಗಾಯವನ್ನು ಆಂಟಿಬಯಾಟಿಕ್ (antibiotic liquid) ವಸ್ತುವಿನಿಂದ ಚೆನ್ನಾಗಿ ತೊಳೆಯಬೇಕು. ತದನಂತರ ಸಮೀಪದ ಆಸ್ಪತ್ರೆಗೆ ತೆರಳಿ ರೇಬೀಸ್ ಲಸಿಕೆ (rabies injection) ಪಡೆಯಬೇಕು.

ಒಂದು ತಿಂಗಳಲ್ಲಿ ನಾಲ್ಕು ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಇದರಿಂದ ರೇಬೀಸ್ ಬರದಂತೆ ತಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬಾರದು ಎಂದು ಡಾ. ಮಲ್ಲಪ್ಪ ಅವರು ಸಲಹೆ ನೀಡುತ್ತಾರೆ.

A woman who went missing with her two children at night was found dead in a well in the morning! ರಾತ್ರಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ Previous post ರಾತ್ರಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ, ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ!
'BJP-JDS Conspiracy' : CM Siddaramaiah ‘ಬಿಜೆಪಿ - ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗಲ್ಲ’ : ಸಿಎಂ ಸಿದ್ದರಾಮಯ್ಯ Next post ‘ಬಿಜೆಪಿ – ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗಲ್ಲ’ : ಸಿಎಂ ಸಿದ್ದರಾಮಯ್ಯ