Shivamogga: A young man was murdered near the APMC vegetable market! ಶಿವಮೊಗ್ಗ : ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ಯುವಕನ ಕೊಲೆ!

bhadravati news | ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!

ಭದ್ರಾವತಿ (bhadravathi), ಡಿಸೆಂಬರ್ 12: ಪ್ರೀತಿಯ ವಿಚಾರದಲ್ಲಿ ಉಂಟಾದ ವಿವಾದವು, ಇಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಆಘಾತಕಾರಿ ಘಟನೆ, ಭದ್ರಾವತಿ ನಗರದ ಜೈ ಭೀಮ್ ನಗರದಲ್ಲಿ ಡಿಸೆಂಬರ್ 12 ರ ಸಂಜೆ ನಡೆದಿದೆ.

ಕಿರಣ್ (25) ಹಾಗೂ ಮಂಜುನಾಥ್ (65) ಕೊಲೆಗೀಡಾದವರೆಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹಳೇನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಣವೇನು? : ಯುವಕ ನಂದೀಶ್ ಹಾಗೂ ಯುವತಿ ಸೃಷ್ಟಿ ಎಂಬುವರು ಪ್ರೀತಿಸುತ್ತಿದ್ದು, ಕಳೆದೆರೆಡು ದಿನಗಳ ಹಿಂದೆ ಪರಾರಿಯಾಗಿದ್ದರು. ಇವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರು. ಡಿಸೆಂಬರ್ 12 ರ ಸಂಜೆ ಅವರು ಭದ್ರಾವತಿಗೆ ಹಿಂದಿರುಗಿದ್ದು, ಹಳೇನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಈ ವೇಳೆ ಯುವತಿಯು ಯುವಕನೊಂದಿಗೆ ಹೋಗುವುದಾಗಿ ತಿಳಿಸಿದ್ದಾಳೆ. ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೇಮಿಗಳಿಗೆ ಬೆಂಬಲವಾಗಿ ನಿಂತಿದ್ದಾರೆಂದು ಕಿರಣ್ ಹಾಗೂ ಮತ್ತೋರ್ವ ಯುವಕನೊಂದಿಗೆ, ಯುವತಿಯ ಸಹೋದರ ಮತ್ತು ಆತನ ಸ್ನೇಹಿತರು ಜೈ ಭೀಮ್ ನಗರದಲ್ಲಿ ಗಲಾಟೆ ಮಾಡಿದ್ದಾರೆ.

ಚೂರಿಯಿಂದ ಇರಿದಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ತೆರಳಿದ್ದ ಮಂಜುನಾಥ್ ಅವರಿಗೂ ಆರೋಪಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಿರಣ್ ಹಾಗೂ ಮಂಜುನಾಥ್ ಅವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.  

Bhadravati, December 12: A shocking incident that resulted in the murder of two people due to a dispute over love took place on the evening of December 12 in Jai Bhim Nagar, Bhadravati city.

Will the government focus on forming a Shivamogga-Bhadravati Metropolitan City Corporation on the model of Bangalore and Mysore? ಬೆಂಗಳೂರು - ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ? Previous post shimoga palike news | ಬೆಂಗಳೂರು, ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?
Next post ಮೌಢ್ಯ – ಕಂದಾಚಾರಗಳನ್ನು ಕೊನೆಗಾಣಿಸಬೇಕು : ಸಿಎಂ ಸಿದ್ದರಾಮಯ್ಯ