shikaripur | Shikaripura PLD Bank Election: After 25 years, Congress in control! shikaripur | ಶಿಕಾರಿಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆ : 25 ವರ್ಷಗಳ ನಂತರ ಕಾಂಗ್ರೆಸ್ ವಶಕ್ಕೆ!

shikaripur | ಶಿಕಾರಿಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆ : 25 ವರ್ಷಗಳ ನಂತರ ಕಾಂಗ್ರೆಸ್ ವಶಕ್ಕೆ!

ಶಿಕಾರಿಪುರ (shikaripura), ಜ. 26: ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳ ವಿರುದ್ಧ ಬಿಜೆಪಿ ದಬ್ಬಾಳಿಕೆ ರಾಜಕಾರಣ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜಗೌಡ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದ ಅಣ್ಣಪ್ಪನಾಯ್ಕ, ರುದ್ರಗೌಡ್ರು, ಮುಗಳಗೆರೆ ರಾಜು ದಬ್ಬಾಳಿಕೆಗೆ ಒಳಗಾದವರು. ಮುಗಳಗೆರೆ ರಾಜು ನಮ್ಮ ಪಕ್ಷದವರಾಗಿ ನಾಮಪತ್ರ ಸಲ್ಲಿಕೆ ತಡೆದು ಬಿಜೆಪಿ ಪರವಾಗಿ ಸ್ಪರ್ಧಿಸುವಂತೆ ಮಾಡಿದರು. ಕೋಳಿ ರುದ್ರಗೌಡರ ಮಗಳಿಗೆ ನಿಮ್ಮ ಮನೆ ಮದುವೆಗೆ ಬರುವುದಿಲ್ಲ ಎನ್ನುವುದು ಸೇರಿ ಹಲವು ಒತ್ತಡ ಹೇರಿ ನಾಮಪತ್ರ ವಾಪಸ್ ತೆಗೆಸಿದರು.

ಅಣ್ಣಪ್ಪನಾಯ್ಕಗೆ ಸಾಲ ಕೊಟ್ಟವರಿಂದ ಒತ್ತಡ ಹೇರಿ ಕಣದಿಂದ ಹಿಂದಕ್ಕೆ ಸರಿಸಿದರು. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲೂ ಗೊಗ್ಗದ ಕಾಂತಣ್ಣಗೆ ಹಣದ ಆಮಿಷ ಒಡ್ಡಿದ್ದಾರೆ. ತಾಲ್ಲೂಕಿನಲ್ಲಿ ಸಹಕಾರಿ ಕ್ಷೇತ್ರದ ಚುನಾವಣೆ ಸುಲಲಿತವಾಗಿ ನಡೆಯುವುದಕ್ಕೆ ಅವಕಾಶ ನೀಡುವ ಬದಲಿಗೆ ಪ್ರಜಾತಂತ್ರ ಹತ್ತಿಕ್ಕುವ ಪ್ರಯತ್ನ ಬಿಜೆಪಿ ತಾಲ್ಲೂಕಿನಲ್ಲಿ ನಡೆಸಿದೆ.

ತಾಲೂಕಿನ ಹಲವು ಸಹಕಾರಿ ಸಂಘದಲ್ಲಿ ಬಿಜೆಪಿ ಸೋಲುಂಡಿದ್ದು ತನ್ಮೂಲಕ ತಾಲೂಕಿನ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. 25 ವರ್ಷದ ಪಿಎಲ್‌ಡಿ ಬ್ಯಾಂಕ್ ಆಳ್ವಿಕೆ ಬಿಜೆಪಿ ಮುಕ್ತವಾಗಿದೆ. ಹಿತ್ತಲ, ನೆಲವಾಗಿಲು, ಕಲ್ಮನೆ ಸೇರಿ ಹಲವು ದೊಡ್ಡ ಸಹಕಾರಿ ಸಂಘದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ ಅದಕ್ಕೆ ಸಹಕಾರ ನೀಡಿದ ತಾಲೂಕಿನ ಎಲ್ಲ ಸಹಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ.

ಬಿಜೆಪಿ ಇನ್ನಾದರೂ ದಬ್ಬಾಳಿಕೆ ನಡವಳಿಕೆ ಕೈಬಿಡಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ, ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ವೀರನಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್‌ಕುಮಾರ್, ಮುಖಂಡರುಗಳಾದ ಗಣೇಶ್, ಮಾರವಳ್ಳಿ ಉಮೇಶ್, ಈಶ್ವರಪ್ಪ, ಅರುಣ್ ಕಣಿವೆಮನೆ, ಉಮೇಶ್‌ಕುಮಾರ್, ಗೊಗ್ಗ ಕಾಂತಣ್ಣ, ವಿರೇಶ್, ಮುನಿಯಪ್ಪ ಇದ್ದರು.

Shikaripura, January 26: Congress leader Nagaraj Gowda has alleged that the BJP has resorted to oppressive politics against three Congress-backed candidates during the election of PLD Bank directors. He was speaking at a press conference in the town on Saturday.

BJP has been defeated in many co-operative societies of the taluk and thus the people of the taluk have given a befitting reply to the BJP. BJP is free from 25 years PLD Bank rule. He said that Congress has dominated many big cooperative societies including Hittala, Nelavahilu, Kalmane.

bengaluru | Micro Finance Harassment: Action Against Forced Debt Recovery – CM Warns bengaluru | ಮೈಕ್ರೋ ಫೈನಾನ್ಸ್ ಕಿರುಕುಳ : ಬಲವಂತದ ಸಾಲ ವಸೂಲಾತಿ ವಿರುದ್ಧ ಕ್ರಮ – ಸಿಎಂ ಎಚ್ಚರಿಕೆ Previous post bengaluru | ಮೈಕ್ರೋ ಫೈನಾನ್ಸ್ ಕಿರುಕುಳ : ಬಲವಂತದ ಸಾಲ ವಸೂಲಾತಿ ವಿರುದ್ಧ ಕ್ರಮ – ಸಿಎಂ ಎಚ್ಚರಿಕೆ
B Y Raghavendra criticism against Madhu Bangarappa! ‘ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳಿವೆ!’ : ಮಧು ಬಂಗಾರಪ್ಪ ವಿರುದ್ಧ ಬಿ ವೈ ರಾಘವೇಂದ್ರ ಟೀಕಾಪ್ರಹಾರ! Next post shimoga | ‘ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳಿವೆ!’ : ಮಧು ಬಂಗಾರಪ್ಪ ವಿರುದ್ಧ ಬಿ ವೈ ರಾಘವೇಂದ್ರ ಟೀಕಾಪ್ರಹಾರ!