Soraba: A house collapsed in Kamarur village! ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ!

soraba news | ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ!

ಸೊರಬ (sorab), ಸೆಪ್ಟೆಂಬರ್ 6: ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಸೊರಬ ತಾಲೂಕಿನ ಜಡೆ ಹೋಬಳಿಯ ಕಮರೂರು ಗ್ರಾಮದಲ್ಲಿ, ಸೆಪ್ಟೆಂಬರ್ 5 ರ ರಾತ್ರಿ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ.

ರಂಗಮ್ಮ (65) ಎಂಬುವರಿಗೆ ಸದರಿ ಮನೆ ಸೇರಿದ್ದಾಗಿದೆ. ಮನೆಯ ಗೋಡೆ ಕುಸಿದು ಬೀಳುತ್ತಿದ್ದಂತೆ, ರಂಗಮ್ಮ ಅವರು ಮನೆಯಿಂದ ಹೊರ ಓಡಿ ಬಂದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೆಂಪು ಹೆಂಚಿನ ಮೇಲ್ಛಾವಣಿಯ ಮನೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಘಟನೆ ನಡೆದು ಹಲವು ಗಂಟೆ ಕಳೆದರೂ ಸ್ಥಳಕ್ಕೆ ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿ – ಸಿಬ್ಬಂದಿಯೂ ಆಗಮಿಸಿ ಪರಿಶೀಲಿಸಿಲ್ಲವೆಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಹಾನಿಯ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Soraba, September 6: A house collapsed on the night of September 5 in Kamarur village of Jade Hobli in Soraba taluk due to recent heavy rains.

Shivamogga | Potholes on the district highway: Is the PWD paying attention? ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ? Previous post shimoga | ಶಿವಮೊಗ್ಗ | ಜಿಲ್ಲಾ ಹೆದ್ದಾರಿಯಲ್ಲಿ ಗುಂಡಿ – ಗೊಟರು : ಗಮನಹರಿಸುವುದೆ ಪಿಡಬ್ಲ್ಯೂಡಿ?
Dharmasthala case: Chinnaiah transferred to Shivamogga Central Jail? ಧರ್ಮಸ್ಥಳ ಪ್ರಕರಣ : ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಚಿನ್ನಯ್ಯ ಸ್ಥಳಾಂತರ? Next post dharmasthala case | ಧರ್ಮಸ್ಥಳ ಪ್ರಕರಣ : ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಬುರುಡೆ ಚಿನ್ನಯ್ಯ – ಪ್ರತ್ಯೇಕ ಸೆಲ್ ವ್ಯವಸ್ಥೆ!