Shivamogga: Electricity facility for agricultural pump sets – Applications invited from MESCOM Kumsi Sub-Division ಶಿವಮೊಗ್ಗ : ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ

shimoga | ಶಿವಮೊಗ್ಗ : ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ನವೆಂಬರ್ 03: ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಹಾಗೂ ಈ ಹಿಂದೆ ಗಂಗಾಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯದ, ಶಿವಮೊಗ್ಗ ತಾಲೂಕು ಕುಂಸಿ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕುಂಸಿ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಕುಂಸಿ, ಆಯನೂರು, ಹಾರನಹಳ್ಳಿ ಮತ್ತು ಶ್ರೀರಾಂಪುರ ಶಾಖಾ ವ್ಯಾಪ್ತಿಗೆ ಒಳಪಡುವ ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.  

ಆಸಕ್ತರು ಗ್ರಾಮೀಣ ಉಪವಿಭಾಗ ಮೆಸ್ಕಾಂ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಫೋಟೋ, ಬಿಪಿಎಲ್ ರೇಷನ್ ಕಾರ್ಡ್,

ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ಬೋರವೆಲ್ ಜೊತೆ ರೈತರ ಜಿಪಿಎಸ್ ಪೋಟೋ ಮತ್ತು ಫೋನ್ ನಂಬರ್ ಗಳನ್ನು ಲಗತ್ತಿಸಿ ನವೆಂಬರ್ 19 ರೊಳಗಾಗಿ ಸಲ್ಲಿಸುವಂತೆ ಕುಂಸಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

shivamogga, november 03: Applications are invited from farmers belonging to Scheduled Castes/Scheduled Tribes under the jurisdiction of Kumsi MESCOM Sub-Division, Shimoga Taluk, to avail electricity facility for agricultural pump sets.

shimoga | sale and purchase of children is a crime under the law. ಶಿವಮೊಗ್ಗ | ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ! Previous post shimoga news | ಶಿವಮೊಗ್ಗ | ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ!