bhadravati | ಭದ್ರಾವತಿ : ಗಣಪತಿ ಮೆರವಣಿಗೆ ಬಂದೋಬಸ್ತ್ ಕಾರ್ಯಕ್ಕೆ ಸಾವಿರಾರು ಪೊಲೀಸರ ನಿಯೋಜನೆ!
ಭದ್ರಾವತಿ (bhadravati), ಸೆ. 14: ಭದ್ರಾವತಿ ನಗರದಲ್ಲಿ ಸೆ. 15 ರಂದು ನಡೆಯಲಿರುವ, ಹಿಂದೂ ಮಹಾಸಭಾ ಗಣಪತಿ (hindu mahasabha ganapathi) ವಿಸರ್ಜನಾ ಪೂರ್ವ ಮೆರವಣಿಗೆಗೆ, ಬಿಗಿ ಪೊಲೀಸ್ ಪಹರೆ (police security) ಯ ವ್ಯವಸ್ಥೆ ಮಾಡಲಾಗಿದೆ.
2 ಹೆಚ್ಚುವರಿ ಎಸ್ಪಿ (asp), 17 ಡಿವೈಎಸ್ಪಿ (dysp), 45 ಇನ್ಸ್’ಪೆಕ್ಟರ್ ಗಳು (inspector), 65 ಸಬ್ ಇನ್ಸ್’ಪೆಕ್ಟರ್ (sub inspector) ಗಳು, 190 ಸಹಾಯಕ ಸಬ್ ಇನ್ಸ್’ಪೆಕ್ಟರ್ (asi) ಗಳು, 1450 ಹೆಡ್ ಕಾನ್ಸ್’ಟೇಬಲ್ (hc) ಮತ್ತು ಕಾನ್ಸ್’ಟೇಬಲ್ (pc) ಗಳು,
450 ಗೃಹ ರಕ್ಷಕ ದಳದ (home guards) ಸಿಬ್ಬಂದಿಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ ತುಕುಡಿ (raf), 5 ಡಿಎಆರ್ (dar) ತುಕುಡಿ, 1 ಕ್ಯೂಆರ್’ಟಿ ತುಕುಡಿ, 8 ಕೆಎಸ್ಆರ್’ಪಿ (ksrp) ತುಕುಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯು (police dept) ಸೆ. 14 ರ ಸಂಜೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಸೂಚನೆ : ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ – ಸಿಬ್ಬಂದಿಗಳಿಗೆ, ಎಎಸ್ಪಿಗಳಾದ ಎ ಜಿ ಕಾರಿಯಪ್ಪ, ಯೋಗೇಶ್ ಅವರು ಸೆ. 14 ರ ಸಂಜೆ ಭದ್ರಾವತಿ ಕನಕ ಮಂಟಪ ಮೈದಾನದಲ್ಲಿ ಸಭೆ ನಡೆಸಿದರು.
ಮೆರವಣಿಗೆ (ganesha idol procession) ಬಂದೋಬಸ್ತ್ ವೇಳೆ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತಂತೆ ಸಲಹೆ ಮತ್ತು ಸೂಚನೆಗಳನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡಿದ್ದಾರೆ.
